ಶ್ರೀ ಮದ್ಯೋಗಿಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದಿಂದ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಶನಿವಾರದಿಂದ ಚಾಲನೆ ದೊರೆಯಿತು. ಶ್ರೀ ವಿಠ್ಠಲಕೃಷ್ಣ ದೇವರ ಪ್ರತಿಷ್ಠಾಪನಾ ದಶಮಾನೋತ್ಸವದ ನಿಮಿತ್ಯ ಲೋಕ ಕಲ್ಯಾಣಾರ್ಥವಾಗಿ ಎ.೧೩, ೧೪ ಮತ್ತು ೧೫ ರಂದು ಕೋಟಿ ಶ್ರೀ ಗಾಯತ್ರಿ ಮಂತ್ರ ಜಪಯಜ್ಞ ಸಾಂಗತಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಬೈಕ್ ರ‍್ಯಾಲಿ : ಶನಿವಾರ ಬೆಳಿಗ್ಗೆ ನಗರಕ್ಕಾಗಮಿಸಿದ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಗಳಿಗೆ ನಗರದ ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನ ಹಾಗೂ ವಿಪ್ರ ಬಾಂಧವರು ವೇದ ಘೋಷಗಳ ಮೂಲಕ ಎಸ್.ಎಫ್.ಎಸ್.ಶಾಲೆಯಿಂದ ಬಸವೇಶ್ವರ ವೃತ್ತ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ಶ್ರೀ ವಿಠ್ಠಲಕೃಷ್ಣ ದೇವಸ್ಥಾನಕ್ಕೆ ಕರೆದೊಯ್ದರು.
ಈ ಸಂದರ್ಭದಲ್ಲಿ ಸಮಾಜದ ಬಾಂಧವರು ಹಾಗೂ ಮುಖಂಡರು ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.