PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳದ ನಾಡಕವಿ ಗವಿಸಿದ್ಧ ಎನ್ ಬಳ್ಳಾರಿಯವರ ೧೦ ನೇ ಪುಣ್ಯಸ್ಮರಣೆಯ ಅಂಗವಾಗಿ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮವು ಇಂದು ದಿನಾಂಕ ೩೦-೦೩-೨೦೧೪ ರಂದು ರವಿವಾರ ಮುಂಜಾನೆ ೧೧ ಗಂಟೆಗೆ ಡಾ.ಜ.ಚ.ನಿ. ಭವನದಲ್ಲಿ ಜರುಗಿತು.  ಕವಿ ಗವಿಸಿದ್ಧ ಎನ್ ಬಳ್ಳಾರಿಯವರ ಕಾವ್ಯ ಕುರಿತು ಗುಲಬುರ್ಗದ ಖ್ಯಾತ ಕನ್ನಡ ಮತ್ತು ಹಿಂದಿ ಕವಿ ಡಾ.ಕಾಶೀನಾಥ ಅಂಬಲಗೆ ಮಾತನಾಡಿ ಕವಿ ಗವಿಸಿದ್ಧ ಎನ್ ಬಳ್ಳಾರಿ ಹೈದ್ರಾಬಾದ್ ಕರ್ನಾಟಕದ ಮಹತ್ವದ ಕವಿ. ಅವರಲ್ಲಿ ವಿನಯವಂತಿಕೆ ಹಾಗೂ ಮುಗ್ಧತೆ ಕಾಣುತ್ತಿದ್ದರೂ ಅವರ ಕವಿತೆಗಳಲ್ಲಿ  ಪ್ರತಿಭಟನೆ ಇದೆ.  ಅವರ ಕವಿತೆಗಳಲ್ಲಿ  ಬುದ್ಧ, ಬಸವ, ಅಂಬೇಡ್ಕರ, ಲೋಹಿಯಾ, ಗಾಂಧೀಜಿ ಅವರಿಂದ ಪ್ರಭಾವಿತರಾದ ಚಿಂತನೆಗಳು ಇವೆ. ಸಮಾಜದಲ್ಲಿ ಸಮಾನತೆ ಹಾಗೂ ಜೀವ- ಪ್ರೇಮಕ್ಕಾಗಿ ಹಪ-ಹಪಿಸುವ  ಕಾತುರತೆಯ ಹಂಬಲ ಇವರ  ಕವಿತೆಗಳಲ್ಲಿವೆ ಎಂದರು.
                  ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಅಭಿಯೋಜಕರಾದ  ಬಿ.ಎಸ್ ಪಾಟೀಲ  ಮಾತನಾಡಿ  ಕವಿತೆಗಳನ್ನು ಕಟ್ಟುವ ಕಲಾತ್ಮಕತೆ ಹಾಗೂ ಸೊಗಸುಗಾರಿಕೆ  ಗವಿಸಿದ್ಧ ಎನ್ ಬಳ್ಳಾರಿಯವರಲ್ಲಿತ್ತು.  ಇವರ ಕವಿತೆಗಳಲ್ಲಿ  ಗಟ್ಟಿತನವಿದೆ ಹಾಗೂ ಸಮಾಜ ಮುಖೀ ಚಿಂತನೆಗಳು ಇವೆ ಎಂದರು.  ನಂತರ ಕವಿಗೋಷ್ಠಿ ಜರುಗಿತು. ಹಲವು ಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಕವಿಗೋಷ್ಠಿ ಅಧ್ಯಕ್ಷತೆ ಡಾ.ಕಾಶೀನಾಥ ಅಂಬಲಗಿ ವಹಿಸಿ ಕವಿಗಳಿಗೆ ಸಲಹೆ ಸೂಚನೆ ಮಾರ್ಗದರ್ಶನ ನೀಡಿದರು. ಪ್ರಾಸ್ತಾವಿಕ ಎಸ್.ಎಸ್. ಪಾಟೀಲ, ಸ್ವಾಗತ ಅಲ್ಲಮಪ್ರಭು ಬೆಟ್ಟದೂರ, ವಂದನಾರ್ಪಣೆ ಡಾ.ಪ್ರಕಾಶಬಳ್ಳಾರಿ, ನಿರೂಪಣೆ ಎಸ್.ಎನ್.ತಿಮ್ಮನಗೌಡರ ನೆರವೇರಿಸಿದರು.   ಸಾಹಿತ್ಯಾಸಕ್ತರು ಹಾಗೂ ಗವಿಸಿದ್ದ ಎನ್ ಬಳ್ಳಾರಿಯವರ ಅಭಿಮಾನಿ ಬಳಗ ಹಾಗೂ ಕವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

31 Mar 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top