ಕೊಪ್ಪಳ : ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಶ್ರೀಮತಿ ಇಂದಿರಾ ಭಾವಿಕಟ್ಟಿಯವರ ನೇತೃತ್ವದಲ್ಲಿ ಸಭೆಯು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ನಡೆಯಿತು.
ಸಭೆಯ ನೆತೃತ್ವ ವಹಿಸಿದ್ದ ಶ್ರೀಮತಿ ಇಂದಿರಾ ಭಾವಿಕಟ್ಟಿಯವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸನ್ಮಾನ್ಯ ಮುಖ್ಯಂತ್ರಿಗಳಾದ ಸಿದ್ದರಾಮಯ್ಯನವರು ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು ಅದರಲ್ಲಿ ಬಡವರ ಪರವಾದ ಕುಟುಂಬಕ್ಕೆ ೧ರೂ ನಂತೆ ೩೦ ಕೆ ಜಿ ಅಕ್ಕಿ ಕೊಡುವ ಅನ್ನಭಾಗ್ಯ, ಯೋಜನೆ, ಶಾಲಾ ಮಕ್ಕಳಿಗೆ ಪೌಷ್ಠಿಕಾಂಶ ಒದಗಿಸುವ ಹಾಲು ನೀಡುವ ಕ್ಷೀರಭಾಗ್ಯ ಯೋಜನೆ, ಬಡವರಿಗೆ ಸೂರು ಒದಗಿಸುವ ವಸತಿ ಭಾಗ್ಯ ಯೋಜನೆ ಮಹಿಳೆಯರ ಅದರಲ್ಲೂ ಮುಸ್ಲಿಂ ಮಹಿಳೆಯರಿಗೆ ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆಯಲ್ಲಿ ತಿಂಗಳಿಗೆ ಮಾಸಾಶನ ಜಾರಿಗೆ ತಂದಿರುವರು. ಹಾಗೂ ಪರಿಶೀಷ್ಠ ಜಾತಿ ಮತ್ತು ಪರಿಶೀಷ್ಠ ಪಂಗಡದವರ ಸಾಲ ಮನ್ನಾ ಮತ್ತು ಹಿಂದುಳಿದ ವರ್ಗದವರು ಸಾಲ ಮನ್ನಾ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಹ ವಿಷಯಗಳನ್ನು ಜನರಿಗೆ ತಿಳಿಯುವಂತೆ ಮಾಡುವ ಕೆಲಸವನ್ನು ಎಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾ ತಾಲೂಕ್ ನಗರ ಬ್ಲಾಕ್ ಮಹಿಳಾ ಪದಾಧಿಕಾರಿಗಳು ಎಲ್ಲಾ ಮಹಿಳಾ ಕಾಂಗ್ರೆಸಿನ್ ಜಿಲ್ಲಾ ತಾಲೂಕ ನಗರ ಬ್ಲಾಕ್ ಮಹಿಳಾ ಪದಾಧಿಕಾರಿಗಳು ಮಾಡಬೇಕೆಂದು ಕರೆ ನೀಡಿದರು.
ಬರುವ ಲೋಕಸಭಾ ಚುನಾವಣಾಯಲ್ಲಿ ಈ ಎಲ್ಲಾ ಯೋಜನೆಗಳು ಅನುಷ್ಠಾನ ನಮ್ಮ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಎಂದರು. ಆದ್ದರಿಂದ ಪ್ರತಿ ಮಹಿಳಾ ಬ್ಲಾಕ್‌ನಲ್ಲಿ ಸಭೆ ನಡೆಸಿ ಕಾಂಗ್ರೆಸ ಪಕ್ಷದ ಕಾಂಗ್ರೆಸ್ ಪಕ್ಷದ ಒಲವಿನತ್ತ ಜನರ ಮನಸ್ಸನ್ನು ಓಲೈಸಲು ಪ್ರಯತ್ನಿಸಬೇಕೆಂದರು.
ಅಲ್ಲದೇ ಪ್ರತಿ ಬ್ಲಾಕಿನಲ್ಲಿ ಮಹಿಳಾ ಸಂಭಂನೆಯನ್ನು ಹೆಚ್ಚಿನರೀತಿಯಲ್ಲಿ ಬಲಪಡಿಸಿ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಜಿ ಪರಮೇಶ್ವರ ಕೆ.ಪಿ.ಸಿ.ಸಿ ಮಹಿಳಾ ಅಧ್ಯಕ್ಷೆಯಾದ ಮಂಜುಳಾ ನಾಯ್ಡುರವರ ಸಾರಧ್ಯದಲ್ಲಿ ಮುನ್ನಡೆದು ಪಕ್ಷ ಬಲಿಷ್ಠ ಬಲಿಷ್ಠ ಪಡಿಸೋಣ ಹಾಗೂ ನಮ್ಮ ನೆಚ್ಚಿನ ನಾಯಕಿಯಾದ ಎ ಐ ಸಿ ಸಿ ಅಧ್ಯಕ್ಷಿಯಾದ ಶ್ರೀಮತಿ ಸೋನಿಯಾ ಗಾಂಧಿ, ಹಾಗೂ ಉಪಾಧ್ಯಕ್ಷರಾದ ಸನ್ಮಾನ್ಯ ರಾಹುಲ ಗಾಂಧಿಯವರ ಕೈಯನ್ನು ಬಲಪಡಿಸೋಣ ಎಂದು ಕರೆ ನೀಡಿದರು.
ಈ ಸಭೆಯಲ್ಲಿ ರಾಜ್ಯ ಮಹಿಳಾ ಕಾರ್ಯದರ್ಶಿಯಾದ ಅನ್ನಪೂರ್ಣ ಸಿಂಗ್, ಬ್ಲಾಕ್ ಅಧ್ಯಕ್ಷಿಯರಾದ ಕುಷ್ಠಗಿಯ ಶಕುಂತಲಾ ಹಿರೇಮಠ, ಯಲಬುರ್ಗಾದ ಜಯಶ್ರೀ ಕಂದಕೂರ, ಕೊಪ್ಪಳದ ಸುನಂದ ಗದ್ದಿಗೇರಿ, ಕನಕಿಗಿರಿಯ ಶಿವಲೀಲಾ ಪಾಟೀಲಾ, ಗಂಗಾವತಿಯ ಕಲ್ಲಮ್ಮ ಮೂಲಿಮನಿ, ಹನುಮಸಾಗರದ ನಿರ್ಮಲಾ ಕರಡಿ, ನಗರ ಅದ್ಯಕ್ಷರಾದ ಕೊಪ್ಪಳದ ಪರವೀನ್ ಮುನಿಯಾರ್, ಜಿಲ್ಲಾ ತಾಲೂಕ ಮಹಿಳಾ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೆಚ್ಚುವರಿ ಮಹಿಳಾ ಪದಾಧಿಕಾರಿಗಳಿಗೆ ಆದೇಶ ನೀಡಲಾಯಿತು.
ಸ್ವಾಗತವನ್ನು ನೂರ್‌ಜಹಾನ್ ಬೇಗಂ ಮಾಡಿದರು. ವಂದನಾರ್ಪಣೆಯನ್ನು ಶಕುಂತಲಾ ಹಿರೇಮಠ ಮಾಡಿದರು.
0 comments:
Post a Comment
Click to see the code!
To insert emoticon you must added at least one space before the code.