ಕನಕಗಿರಿ ನಗರಕ್ಕೆ ಮಂಜೂರು ಮಾಡಬೇಕಾದ ದ್ರಾಕ್ಷಿರಸ(ವೈನ್‌ಶಾಪ್) ಪರವಾನಿಗೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದ್ವಂದ್ವನೀತಿ ಅನುಸರಿಸುತ್ತಿರುವುದನ್ನು ಸಿಪಿಐಎಂಎಲ್ ಲಿಬರೆಷನ್ ಹೈ-ಕ ಕಾರ್ಯದರ್ಶಿ ಭಾರದ್ವಾಜ್ ಖಂಡಿಸಿದ್ದಾರೆ.
ಈಗಾಗಲೇ ಕನಕಗಿರಿಯಲ್ಲಿ ಸಿಎಲ್-೨, ಸಿಎಲ್-೭, ಸಿಎಲ್-೯ ಮಧ್ಯದಂಗಡಿಗಳು ಕಾರ್ಯನಿರ್ವಹಿ ಸುತ್ತಿದ್ದು, ಈ ಅಂಗಡಿ ಮಾಲೀಕರು ಕನಕಗಿರಿ ಸುತ್ತಮುತ್ತ ಹಾಗೂ ನಗರದ ಗಲ್ಲಿ-ಗಲ್ಲಿಗಳಲ್ಲಿ ಅನಧಿಕೃತ ಅಕ್ರಮ ಮಧ್ಯೆ ಮಾರಾಟದ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಮತ್ತು ಸರ್ಕಾರ ನಿಗದಿಪಡಿಸಿದ ಹಣಕ್ಕಿಂತಲೂ ಹೆಚ್ಚುವರಿ ಧರದಲ್ಲಿ ಮಧ್ಯೆಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ಮತ್ತು ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆಂದು ಭಾರದ್ವಾಜ್ ಆರೋಪಿಸಿದ್ದಾರೆ.
ಇಷ್ಟೆಲ್ಲಾ ಅಕ್ರಮ ಮಧ್ಯೆಮಾರಾಟ ಜರುಗುತ್ತಿದ್ದರೂ ಅಬಕಾರಿ ಇಲಾಖೆ ಇತ್ತ ಗಮನಹರಿಸದೇ, ಮೌನವಾಗಿದ್ದು ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಆದರೆ ದ್ರಾಕ್ಷಿರಸ ಅಂಗಡಿ ಮಂಜೂರಾತಿಗಾಗಿ ಅರ್ಜಿ ಹಾಕಿರುವ ಕೆಲವು ಫಲಾನುಭವಿಗಳಿಗೆ ಇಲ್ಲಸಲ್ಲದ ಕಾನೂನು ನೆಪಹೇಳಿ ಮಂಜೂರಾತಿಯನ್ನು ಒಂದು ವರ್ಷದಿಂದ ವಿಳಂಬ ಮಾಡುತ್ತಿ ರುವುದು ವಿಷಾದನೀಯ ಎಂದಿದ್ದಾರೆ. ಜೊತೆಗೆ ಸದ್ರಿ ನಗರದ ಎಲ್ಲ ಮಧ್ಯೆ ಮಾರಾಟದ ಅಂಗಡಿಗಳು ರಾಜ್ಯ ಹೆದ್ದಾರಿ ರಸ್ತೆಗೆ ಹೊಂದಿಕೊಂಡಿದ್ದರೂ, ಯಾವುದೇ ಕ್ರಮ ಜರುಗಿಸದೇ ಇರುವುದು ಖಂಡನೀಯವಾಗಿದೆ.
ಕೂಡಲೇ ಅಕ್ರಮ ಮಧ್ಯೆಮಾರಾಟವನ್ನು ಕನಕಗಿರಿಯಲ್ಲಿ ತಡೆಯಬೇಕು, ಹಾಗೂ ಸರ್ಕಾರಿ ನಿಗಧಿಪಡಿಸಿದ ದರದಲ್ಲಿ ಗ್ರಾಹಕರಿಗೆ ಮಧ್ಯೆಮಾರಾಟ ಮಾಡಬೇಕು. ರೈತರ ಬೆಳೆಯಿಂದ ಉತ್ಪದನೇಯಾಗುವ ದ್ರಾಕ್ಷಿರಸದ ಅಂಗಡಿಯನ್ನು ಬೇಗನೇ ಕನಕಗಿರಿಗೆ ಮಂಜೂರು ಮಾಡಬೇಕು. ಒಂದುವೇಳೆ ಮಧ್ಯೆ ಮಾರಾಟದ ಲಾಭಿಗೆ ಮಣಿದು ದ್ರಾಕ್ಷಿರಸ ಮಾರಾಟದ ಅಂಗಡಿಗಳನ್ನು ತಡೆದರೆ, ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.