ನನ್ನ ಭಾಷೆ
ನನ್ನ ಭಾಷೆ ಕನ್ನಡ
ಇದು ಮನದ ಭಾಷೆ
ರಕ್ತದ ಕಣಕಣದ ಭಾಷೆ
ತಾಯಿ ಭಾಷೆ ಇದು
ನನ್ನ ಭಾಷೆ ಇದು
ರನ್ನನಾಡಿದ ಭಾಷೆ
ಪೊನ್ನ-ಜನ್ನರಾಡಿದ ಭಾಷೆ
ಕವಿರತ್ನ ಕಾಳಿದಾಸನ ಕಾವ್ಯದ ಭಾಷೆ
ಕುಮಾರವ್ಯಾಸನು ನುಡಿದ ಭಾಷೆ
ಭೀಮಸೇನ ಜೋಶಿಯವರ ಸಂಗೀತದ ಭಾಷೆ
ಕುವೆಂಪುವಿನಿಂದ ಇಂದಿನ ಸಾಹಿತ್ಯಾಸಕ್ತರವರೆಗೆ ಬೆಳೆದ ಭಾಷೆ
ಕರ್ನಾಟಕ ರತ್ನ ರಾಜಕುಮಾರರ ಅಭಿನಯದ ಭಾಷೆ
ಇದು ನನ್ನ ಭಾಷೆ ಇದು ನನ್ನ ಭಾಷೆ
ನಾನು ಮಾತು ಕಲಿತ ಭಾಷೆ
ನಾನು ಆಟವಾಡಿದ ಭಾಷೆ
ನಾನು ಪಾಠ ಕಲಿತ ಭಾಷೆ
ಇದು ನನ್ನ ಭಾಷೆ
ಇದು ನನ್ನ ಕವಿತೆಯ ಭಾಷೆ
ಇದು ನನ್ನ ಉಸಿರು-ಹೆಸರಿನ ಭಾಷೆ
ಸುವರ್ಣ ಶಿ. ಕಂಬಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಕರಾಮವಿವಿ, ಜ್ಞಾನಶಕ್ತಿ ಆವರಣ,
ತೊರವಿ, ವಿಜಾಪುರ-೫೮೬೧೦೮
0 comments:
Post a Comment
Click to see the code!
To insert emoticon you must added at least one space before the code.