
ಇದೇ ನ.೧ ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾದ ಗುಲ್ಬರ್ಗಾ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಅರಕೇರಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ತಂಡವು ವ್ಹಾಲಿಬಾಲ್ ಸ್ಪರ್ಧೆಯಲ್ಲಿ ರಾಯ
ಚೂರು ವಿದ್ಯಾರ್ಥಿನಿಯರ ತಂಡವನ್ನು ೨೫-೧೮ ಹಾಗೂ ೨೫-೨೦ ರ ನೇರ ಸೆಟ್‌ಗಳಿಂದ ಮಣಿಸಿ ಜಯಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಈ ಅಭೂತಪೂರ್ವ ಸಾಧನೆಯನ್ನು ಮೆಚ್ಚಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕ ದೈಹಿಕ ಶಿಕ್ಷಣಾಧಿಕಾರಿಗಳು, ಶಾಲಾ ಮುಖೋಪಾಧ್ಯಾಯರು ಹಾಗೂ ಶಿಕ್ಷಕರ ವೃಂದ, ಶಾಲಾ ಮೇಲುಸ್ತುವಾರಿ ಸಮಿತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಹಾಗೂ ವಿವಿಧ ಸಂಘ, ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿ ಅಭಿನಂಧಿಸಿವೆ.
ಶಾಲೆಯ ಬಹುದಿನದ ಕನಸನ್ನು ಈ ಸಾಧನೆ ಮೂಲಕ ವಿದ್ಯಾರ್ಥಿಗಳು ಸಕಾರಗೊಳಿಸಿದ್ದಾರೆ. ವ್ಹಾಲಿಬಾಲ್ ಆಟಕ್ಕೆ ಬದ್ರ ಬುನಾದಿಯನು ಹಾಕಿದ ಅರಕೇರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ದೈಹಿಕ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಬಹು ವರ್ಷದ ಕನಸು ನನಸು ಮಾಡಿದಂತಾಗಿದೆ ಎಂದು ಆರ್.ಎಮ್.ಎಸ್.ಎ. ಯೋಜನಾ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಾಧನೆಗೆ ಸಹಕರಿಸಿದ ಗ್ರಾ.ಪಂ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಊರಿನ ಗುರು ಹಿರಿಯರು, ವಿದ್ಯಾರ್ಥಿಗಳ ಪಾಲಕರಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶಾಲಾ ಮುಖ್ಯೋಪಾಧ್ಯರು ಅಭಿನಂದನೆ ತಿಳಿಸಿದ್ದಲ್ಲದೇ ಮುಂದಿನ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಈ ಪ್ರತಿಭೆಗಳಿಗೆ ಸೂಕ್ತ ತರಬೇತಿ ವ್ಯವಸ್ಥೆ ಕಲ್ಪಿಸುವುದಾಗಿ ಅವರಿಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.