PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಗಿರಿಗೌಡ ಹಾಗೂ ಜಿಲ್ಲಾಧ್ಯಕ್ಷ ಕರಡಿ ಸಂಗಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ಪೂರ್ವದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ನಿನ್ನೆ ಮೃತಪಟ್ಟ ರೈತ ವಿಠ್ಠಲ ಅರಬಾವಿ ಅವರ ಆತ್ಮಕ್ಕೆ ಚಿರಶಾಂತಿಕೋರಿ ಹಗೂ ಕೊಪ್ಪಳ ನಗರದ ಹಿರಿಯರು ಹಾಗೂ ರಾಜ್ಯ ಭಣಜಿಗ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಣ್ಣ ಅಗಡಿಯವರು ನಿನ್ನೆ ನಿಧನ ಹೊಂದಿದ ಪ್ರಯುಕ್ತ ಅವರ ಆತ್ಮಕ್ಕೂ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಿದರು. 
ನಂತರ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಅಶೋಕ ವೃತದವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕರಡಿ ಸಂಗಣ್ಣ ಮಾತನಾಡಿ ಕಬ್ಬುಬೆಳೆಗೆ ನ್ಯಾಯ ಸಮ್ಮತ ದರ ನೀಡುವಲ್ಲಿ ಕರ್ನಾಟಕ ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ರೈತರು ಹಾಗೂ ಕಾರ್ಖಾನೆಗಳೊಂದಿಗೆ ನಡೆದ ಸಭೆಯು ವಿಫಲವಾದಾಗ್ಯೂ ಸಭೆಯಲ್ಲಿ ರೈತರು ಟನ್ನಗೆ ೨೫೦೦ ರೂಪಾಯಿಗೆ ಕಬ್ಬು ಸರಬರಾಜು ಮಾಡಲು ಒಪ್ಪಿರುವುದಾಗಿ ಮಾಧ್ಯಮಕ್ಕೆ ಹೇಳಿದ ಕಾರಣ ರೊಚ್ಚಿಗೆದ್ದ ರೈತರು ಸುವರ್ಣ ಸೌಧದ ಮುಂದೆ ನಡೆಸುತ್ತಿರುವ ಪ್ರತಿಭಟಣೆಯನ್ನು ನಿರ್ಲಕ್ಷ ಮಾಡಿದ್ದಕ್ಕೆ ಮನನೊಂದ ರೈತ ಆತ್ಮ ಹತ್ಯೆಮಾಡಿಕೊಂಡ ಪರಿಣಾಮ ವಿಠ್ಠಲ ಅರಬಾವಿ ಸಾವಿಗೆ ಕಾರಣರಾದ ಸನ್ಮಾನ್ಯ ಮುಖ್ಯಮಂತ್ರಿಗಳ ದ್ವಂದ ನೀತಿಯನ್ನು ಖಂಡಿಸಿ ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೇಸ ನೇತೃತ್ವದ ಕೇಂದ್ರದ ಯು.ಪಿ.ಎ. ಹಾಗೂ ರಾಜ್ಯ ಸರಕಾರಗಳೆರಡೂ ರೈತರ ಸಾವಿಗೆ ಕಾರಣವಾಗಿರುವುದು ವಿಷಾದನಿಯ. ಕಾರಣ ಇವೆರಡು ಸರಕಾರವು ತಕ್ಷಣ ರೈತರ ಬೇಡಿಕೆ ಈಡೆರಿಸಬೇಕು. ಹಾಗೂ ನೈತಿಕ ಹೊಣೆ ಹೊತ್ತು  ಸಿದ್ದರಾಮಯ್ಯನವರು ರಾಜಿನಾಮೆ ನೀಡಬೇಕೆಂದು ಆಗ್ರಹಸಿದರು. 
ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಗಿರಿಗೌಡ ಮಾತನಾಡಿ ಕೇಂದ್ರ ಸರಕಾರ ತಪ್ಪು ನೀತಿಯಿಂದ ದೇಶದಲ್ಲಿ ಸಕ್ಕರೆ ದಾಸ್ತಾನು ಸಾಕಾಗುವಷ್ಠಿದ್ದರು ಮಾರಾಟಕ್ಕೆ ಅವಕಾಶ ಕೊಡದೇ ಅನಾವಷ್ಯಕವಾಗಿ ಆಮದು ಮಾಡಿಕೊಳ್ಳುತ್ತಿರುವುದು ಕಾರವಾಗಿರುವುದು ಮೇಲು ನೋಟಕ್ಕೆ ಕಂಡು ಬರುತ್ತದೆ. ರೈತರ ಬದುಕಿಗೆ ಮಾರಕವಾಗುವ ಆಮದು ನೀತಿಯನ್ನು ಭಾರತಿಯ ಜನತಾಪಕ್ಷ ರೈತ ಮೋರ್ಚ ತಹಶಿಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಆರ್.ಬಿ. ಪಾನಗಂಟಿ, ತಿಪ್ಪೆರುದ್ರ ಸ್ವಾಮಿ, ಸಿದ್ರಾಮ ಸ್ವಾಮಿ, ಜೆ. ಬಿ. ನಾರಾಯಣಪ್ಪ, ಸಂಗಪ್ಪ ಹೊಕ್ಕಳದ, ನರಸಿಂಗರಾವ್ ಕುಲಕರ್ಣಿ ರಾಜು ಬಾಕಳೇ, ಅಪ್ಪಣ್ಣ ಪಧಕಿ, ತೋಟಪ್ಪ ಮೇಟಿ, ಶಿವಪ್ಪ ಮುತ್ತಾಳ, ಸದಾಶಿವಯ್ಯ ಹಿರೇಮಠ, ರವೀಂದ್ರರಾವ್, ಹೇಮಲತಾ ನಾಯಕ, ಶ್ಯಾಮಲಾ ಕೋನಾಪೂರ, ಮಂಜುನಾಥ ಪಾಟೀಲ್, ನಗರಸಭಾ ಸದಸ್ಯರಾದ ಸಲೀಮ್ ಸಾಬ್, ಗವಿಸಿದ್ದಪ್ಪ ಚಿನ್ನೂರ, ಬಸವರಾಜ ನೀರಲಗಿ, ಶಿವಪ್ಪ ಜಂಗಲಿ, ನಾಮದೇವ ಜಕ್ಕಲಿ, ಪ್ರಾಣೇಶ ಮಹೇಂದ್ರಕರ್, ಮುಖಂಡರಾದ ಉಮೇಶ ಕುರಡೇಕರ್, ದೇವರಾಜ ಹಾಲಸಮುದ್ರ, ಮಂಜುನಾಥ ಹಳ್ಳಿಖೇರಿ, ಸುರೇಶ ಮುದೋಳ, ಪರಮಾನಂದ ಯಾಲಗಿ, ಮಹಾದೇವಪ್ಪ ಜವಳಿ, ಮುತ್ತುಸ್ವಾಮಿ, ಸೈಯದ್ ನೂರ ಪಾಷಾ,  ನಿಂಗಜ್ಜ ಬಂಡಿಹರಲಾಪೂರ, ಹಾಗೂ ಜಿಲ್ಲಾ ಬಿಜೆಪಿ ವಕ್ತಾರ ಚಂದ್ರಶೇಕರಗೌಡ ಪಾಟೀಲ ಹಲಗೇರಿ ಮುಂತಾದವರು ಉಪಸ್ಥಿತರಿದ್ದರು. 

28 Nov 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top