PLEASE LOGIN TO KANNADANET.COM FOR REGULAR NEWS-UPDATES

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಹಾಗೂ ಜಿಲ್ಲಾ ವಕೀಲರ ಸಂಘ, ಕೊಪ್ಪಳ ದ.ಭಾ.ಹಿಂ.ಪ್ರಚಾರ ಸಭಾ  ಕಾನೂನು ಮಹಾವಿದ್ಯಾಲಯದ ರಾಷ್ಟೀಯ ಸೇವಾ ಯೋಜನಾ ಘಟಕ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ದಿನಾಚರಣೆಯ ನಿಮಿತ್ತ  ಕಾನೂನು ಸಂಘ ಉದ್ಘಾಟನೆ ಹಾಗೂ  ಭಾರತ ಸಂವಿಧಾನದ ಕುರಿತು ವಿಶೇಷ ಉಪನ್ಯಾಸ" ಹಮ್ಮಿಕೊಳ್ಳಲಾಯಿತು.
 ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ   ಶ್ರೀಕಾಂತ ದಾ. ಬಬಲಾದಿ  ಜಿಲ್ಲಾ ಮತ್ತು ಸತ್ರ ನ್ಯಾಯಾಶರು ಹಾಗೂ ಅಧ್ಯಕ್ಷರು,  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ  ಇವರು ಕಾರ್ಯಕ್ರಮ ಉದ್ಘಾಟಿಸಿ ಕಾನೂನು ದಿನಾಚರಣೆಯ ಹಾಗೂ ಸಂವಿಧಾನದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯಅತಿಥಿಗಳಾಗಿ ಆಗಮಿಸಿದ ಬಸವರಾಜ ಶಂ. ಚೇಗರಡ್ಡಿ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯಾದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಇವರು ಕಾನೂನು ಸೇವೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೋಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
                       ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ    ಎ.ವಿ.ಕಣವಿ ಅಧ್ಯಕ್ಷರು, ಜಿಲ್ಲಾ ವಕೀಲರು ಸಂಘ, ಕೊಪ್ಪಳ ಇವರು ಸಂವಿಧಾನ ಯಾವ ರೀತಿ ಜಾರಿಗೆ ಬಂದಿತು ಎಂಬ ವಿಷಯ ಕುರಿತು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸಂಧ್ಯಾ ಬಿ. ಮಾದಿನೂರು ಲಾ ಅಕಾಡಮಿ ಅಧ್ಯಕ್ಷರು ಹಾಗೂ ರಾಜ್ಯ ವಕೀಲಪರಿಷತ್ ಸದಸ್ಯರು ಬೆಂಗಳೂರು ಇವರು ಅದ್ಯಕ್ಷೀಯ ಭಾಷಣ ಮಾಡಿದರು. ಉಪನ್ಯಾಸಕರಾಗಿ ಆಗಮಿಸಿದ   ಕೆ.ನಾಗಬಸಯ್ಯ ಉಪನ್ಯಾಸಕರು ದ.ಭಾ.ಹಿಂ.ಪ್ರಚಾರ ಸಭಾ  ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರು ಭಾರತ ಸಂವಿಧಾನದ ಹುಟ್ಟು ಮತ್ತು ಬೆಳವಣಿಗೆ ಕುರಿತು ಉಪನ್ಯಾಸ ನೀಡಿದರು. ಗಿರೀಜಾ ಹಾಗೂ ಶಿಲ್ಪಾ ಪ್ರಾರ್ಥಿಸಿದರು ಡಾ.ಬಿ.ಎಸ್.ಹನಸಿ ಪ್ರಾಚಾರ್ಯರು, ಸ್ವಾಗತಿಸಿದರು, ನಿಂಗಪ್ಪ ಎಮ್.ದೊಡ್ಡಮನಿ ನಿರೂಪಿಸಿದರು,ಪ್ರಧಾನ ಕಾರ್ಯದರ್ಶಿ ಸುರೇಶ ಹಳ್ಳಿಕೇರಿ ವಂದಿಸಿದರು ಕಾನೂನು ಸಂಘದ ಪ್ರವರ್ತಕ ಹಾಗೂ ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ   ಬಸವರಾಜ್ ಎಸ್.ಎಂ,ಉಪನ್ಯಾಸಕರಾದ ಶ್ರೀಮತಿ ಉಷಾದೇವಿ ಹಿರೇಮಠ, ಡಾ. ಎನ್. ಮುದ್ದುರಾಜ್, ಸೇರಿದಂತೆ ಪ್ರಧಾನ ಕಾರ್ಯದರ್ಶಿ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

28 Nov 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top