PLEASE LOGIN TO KANNADANET.COM FOR REGULAR NEWS-UPDATES





  ಡಾ. ಶಿವರಾಮ ಕಾರಂತರು ತಮ್ಮ ಸಾಹಿತ್ಯದಲ್ಲಿ ವಾಸ್ತವಿಕತೆಯನ್ನು ಪ್ರತಿಪಾದನೆಯನ್ನು ಮಾಡುತ್ತಾ, ಅದನ್ನೇ ತಮ್ಮ ಬದುಕಿನಲ್ಲಿ ಕೂಡ ಅಳವಡಿಸಿಕೊಂಡಿದ್ದರು.  ಅವರು ಸ್ವಾತಂತ್ರವನ್ನ ಪ್ರೀತಿಸುವದರ ಜೊತೆಗೆ ಅದನ್ನು ಪ್ರತಿಯೋಬ್ಬರ ಬದುಕಿನಲ್ಲಿಯ ಕೂಡ ಪ್ರೇರೆಪಿಸಿದರು ಎಂದು ಉಪನ್ಯಾಸಕ ಫಕೀರಪ್ಪ ವಜ್ರಬಂಡಿ ಹೇಳಿದರು.  ಜಿಲ್ಲಾ ಕನ್ನಡ ಸಾಹಿತ್ಯ ಪರೀಷತ್ತು, ತಾಲೂಕ ಕನ್ನಡ ಪರೀಷತ್ತು ಮತ್ತು ಜ್ಞಾನ ಬಂಧು ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಹಮ್ಮೀಕೊಂಡಿದ್ದ ಕಾರಂತರ ಬದುಕು ಬರಹ ಕುರಿತು ವಿಚಾರ ಸಂಕೀರಣದಲ್ಲಿ ಮಾತನಾಡುತ್ತೀದ್ದರು.  ಅವರ ಮೂಕಜ್ಜಿಯ ಕನಸು ಕಾದಂಬರಿ ಶ್ರೇಷ್ಠ ಕೃತಿಯಾಗಿದೆಯೆಂದು ಅಭಿಪ್ರಾಯ ಪಟ್ಟರು.
ಜ್ಞಾನ ಬಂಧು ಪ್ರಾಥಮಿಕ ಶಾಲೆಯ ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ ನಾಡ ದೇವಿಗೆ ಗೌರವ ಸಮರ್ಪಿಸಿ ಮಾತನಾಡುತ್ತ ಕಾರಂತರ ಸಾಹಿತ್ಯ ಜೀವ ಸೆಲೆ ಇದ್ದ ಹಾಗೆ ಎಂದರು.  ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನ್ಯಾಯವಾದಿ ಕೆ. ಸತ್ಯನಾರಾಯಣ ಬಳ್ಳಾರಿ ಮಾತನಾಡುತ್ತಾ ಸಾಹಿತ್ಯ ನಿಂತ ನೀರಲ್ಲ ನೀರಂತರ ಚಲನ ಶೀಲ ಎಂದರು.  
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ವೀರಪ್ಪ ಮ. ನಿಂಗೋಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಕೊಪ್ಪಳ ತಾಲೂಕ ಕ.ಸಾ.ಪ ಅಧ್ಯಕ್ಷ ಶಿ ಕಾ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು.  ಶಿಕ್ಷಕಿ ಕು|| ಜ್ಯೋತಿ ಸುತಾರ, ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ, ಶೀವಾನಂದ ಹೋದ್ಲುರ, ಹಾಗೂ ಅಕ್ಬರ್ ಸಿ. ಕಾಲಿಮಿರ್ಚಿ ಉಪಸ್ಥಿತರಿದ್ದರು.  ಸ್ವಾಗತ ಮಂಗಳಾ ಡಂಬಳ,  ಶಿವರಾಜ ಏಣಿ ನಿರೂಪಣೆ ಮಾಡಿದರು ಕೊನೆಯಲ್ಲಿ ಮಂಜುಳಾ ದೇವರಮನಿ ವಂದಿಸಿದರು.

25 Nov 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top