ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ೬ನೇ ಆರ್ಥಿಕ ಗಣತಿ ಕುರಿತಂತೆ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೦೬ ನೇ ಆರ್ಥಿಕ ಗಣತಿ ಅಂಗವಾಗಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ನಡೆಯುತ್ತಿರುವ ಉದ್ಯಮಗಳನ್ನು ಗಣತಿದಾರರು ಮನೆ ಮನೆ ಸಂದರ್ಶಿಸುವುದರ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಈ ಗಣತಿಯಿಂದಾಗಿ ಗ್ರಾಮ, ತಾಲೂಕು ಮತ್ತು ಜಿಲ್ಲೆಯಲ್ಲಿರುವ ಉದ್ಯಮಗಳ ಸಂಖ್ಯೆ, ಅವುಗಳಲ್ಲಿನ ಕೆಲಸಗಾರರ ಸಂಖ್ಯೆ, ನಡೆಸುತ್ತಿರುವ ಆರ್ಥಿಕ ಚಟುವಟಿಕೆಗಳ ವಿಧಗಳು ಇ
ತ್ಯಾದಿ ಮಹತ್ವದ ಅಂಶಗಳನ್ನು ಸಂಗ್ರಹಿಸಬಹುದಾಗಿದೆ. ೮ಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಉದ್ಯಮಗಳ ಮಾಹಿತಿ, ರಫ್ತು ಉದ್ಯಮಗಳ ಮಾಹಿತಿ, ಅಲ್ಲದೆ ಇತರೆ ಮಾಹಿತಿಯಡಿ ೧ ರಿಂದ ೭ ಜನ ಕೆಲಸಗಾರರಿರುವ ಉದ್ಯಮಗಳ ಮಾಹಿತಿ ಹಾಊ ಆರ್ಥಿಕ ಚಟುವಟಿಕೆಗಳ ವಿವರ ಸಂಗ್ರಹಿಸಲಾಗುವುದು. ೬ನೇ ಆರ್ಥಿಕ ಗಣತಿಗಾಗಿ ಈಗಾಗಲೆ ೮೨೩ ಜನ ಗಣತಿದಾರರು ಹಾಗೂ ೪೧೧ ಜನ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಗಣತಿಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ೨೪೬೭ ಬ್ಲಾಕ್ ಗಳನ್ನು ರಚಿಸಲಾಗಿದೆ. ಗಣತಿದಾರರು, ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಗಾಗಿ ಒಟ್ಟು ೧೦ ಜನ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ. ಒಟ್ಟಾರೆ ಅತ್ಯಂತ ಮಹತ್ವದ್ದಾಗಿರುವ ೬ನೇ ಆರ್ಥಿಕ ಗಣತಿಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಭೀಮಶಾ ಬಿ ಸಿಂಗೆ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭೆ, ಪಟ್ಟಣ ಪಂಚಾಯತಿ, ನಗರಸಭೆಗಳ ಅಧಿಕಾರಿಗಳು, ತಹಸಿಲ್ದಾರರು ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.