PLEASE LOGIN TO KANNADANET.COM FOR REGULAR NEWS-UPDATES

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ೨೦೧೨ನೇ  ಸಾಲಿನಲ್ಲಿ ಪ್ರಕಟವಾದ  ಸೃಜನೇತರ  ಕನ್ನಡ  ಗೃಂಥಗಳಿಗೆ  ಧನಸಹಾಯಕ್ಕಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. 
  ಪ್ರಕಟಿತ ಗ್ರಂಥಗಳ ಒಟ್ಟು ೧೦೦೦ ಪ್ರತಿ ಮುದ್ರಣ ವೆಚ್ಚದ ಅರ್ಧದಷ್ಟು, ಅಥವಾ ೧೦೦೦೦ ರೂ. ಗಳು ಇದರಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಸಹಾಯಧನವನ್ನಾಗಿ ನೀಡಲಾಗುವುದು.  ಸೃಜನೇತರ ಪ್ರಕಾರಕ್ಕೆ ಸೇರಿದ ಜಾನಪದ, ವೈಜ್ಞಾನಿಕ, ಐತಿಹಾಸಿಕ, ಸಾಂಸ್ಕೃತಿಕ, ಪ್ರವಾಸ ಕಥನ ಮತ್ತು ವಯಕ್ತಿ ವಿಶೇಷ ಕುರಿತ ಸಾಹಿತ್ಯಕ ಮೌಲ್ಯವುಳ್ಳ ವಿಮರ್ಶಾತ್ಮಕ ಗ್ರಂಥಗಳಿಗೆ ಮಾತ್ರ ಧನ ಸಹಾಯ ನೀಡಲಾಗುವುದು.  ಕಥೆ, ಕಾದಂಬರಿ, ಕಾವ್ಯ, ನಾಟಕ, ಹರಟೆ, ಮಕ್ಕಳ ಸಾಹಿತ್ಯ, ಭಾಷಾಂತರ ಕೃತಿಗಳು, ಅಭಿನಂದನಾ ಗ್ರಂಥ, ನೆನಪಿನ ಸಂಚಿಕೆಗಳನ್ನು ಪರಿಗಣಿಸಲಾಗುವುದಿಲ್ಲ.  ೨೦೧೨ ರ ಜನವರಿ ೦೧ ರಿಂದ ಡಿ. ೩೧ ರವರೆಗೆ ಪ್ರಥಮಾವೃತ್ತಿಯಾಗಿ ಪ್ರಕಟವಾದ ಕೃತಿಗಳನ್ನು ಮಾತ್ರ ಸಲ್ಲಿಸಬೇಕು.  ಲೇಖಕರು ಕೃತಿಯ ೩ ಪ್ರತಿಗಳನ್ನು ಮಾತ್ರ ಅರ್ಜಿ ಜೊತೆ ಸಲ್ಲಿಸಬೇಕು.  ಪರಿಶೀಲನಾ ಶುಲ್ಕವನ್ನಾಗಿ ೧೦೦ ಪುಟಗಳ ಕೃತಿಗೆ ರೂ. ೧೦೦ ರಂತೆ ಮತ್ತು ಆನಂತರದ ಪ್ರತಿ ೧೦೦ ಪುಟಗಳಿಗೆ ರೂ. ೫೦ ರಂತೆ ಲೆಕ್ಕ ಹಾಕಿ, ಮೊತ್ತವನ್ನು  ಖಜಾನೆಗೆ, ೨೦೨- ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ -೦೪ ಮತ್ತು ಕಲೆ ಮತ್ತು ಸಂಸ್ಕೃತಿ - ೮೦೦ ಇತರೆ  ರಸೀದಿ-೦ ಇತರೆ-೦೪ ಇತರೆ ಬಾಬ್ತು ಲೆಕ್ಕಶೀರ್ಷಿಕೆಗೆ ಖಜಾನೆಯಲ್ಲಿ  ಜಮಾ ಮಾಡಿ,  ಅದರ  ರಸೀದಿಯನ್ನು  ಅರ್ಜಿ ಜೊತೆಗೆ ಲಗತ್ತಿಸಿ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-೦೨ ವಿಳಾಸಕ್ಕೆ ನೇರವಾಗಿ ಅರ್ಜಿಗಳನ್ನು ಅ.೨೧ ರೊಳಗಾಗಿ ಸಲ್ಲಿಸಬಹುದಾಗಿದೆ.  ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರಿಂದ ಪಡೆಯಬಹುದಾಗಿದೆ ಎಂದು ತಿಳಿಸಿದೆ. 

28 Sep 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top