
ಕೊಪ್ಪಳ. ಕೊಪ್ಪಳ ನಗರಕ್ಕೆ ಪೂರೈಕೆಯಾಗುತ್ತಿರುವ ತುಂಗಭದ್ರಾ ನದಿ ತೀರದ ಬಳಿಯ ಜಾಕ್‌ವೆಲ್ ಸ್ಥಳಕ್ಕೆ ಭಾನುವಾರ ಕೊಪ್ಪಳ ನಗರಸಭೆಯ ನೂತನ ಅಧ್ಯಕ್ಷ ಲತಾ ವೀರಣ್ಣ ಸಂಡೂರ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
.jpg)
ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಬಳಿಯ ಜಾಕ್‌ವೆಲ್ ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷ-ಉಪಾಧ್ಯಕ್ಷರು. ಕುಡಿವ ನೀರು ಪೂರೈಕೆಯ ಶೇಖರಣಾ ಟ್ಯಾಂಕ್‌ನ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಅವರು, ಸ್ಥಳದಲ್ಲಿದ್ದ ಸಿಬ್ಬಂದಿಗೆ ಕೊಪ್ಪಳ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಆದೇಶಿಸಿದರು.
ನಂತರ ಅವರು ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಬಳಿಯ ಜಾಕ್‌ವೆಲ್ ಸ್ಥಳಕ್ಕೂ ತೆರಳಿ ಪರಿಶೀಲನೆ ನಡೆಸಿದರು. ಪೈಪ್‌ಲೈನ್ ದುರಸ್ತಿ ಹಾಗೂ ನೀರು ಪೋಲಾಗುವುದನ್ನು ಕೂಡಲೇ ತಡೆಗಟ್ಟುವಂತೆ ಅಧ್ಯಕ್ಷ-ಉಪಾಧ್ಯಕ್ಷರು ನೀರು ಪೂರೈಕೆಯ ಮೇಲ್ವ್ವಿಚಾರಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನೀರು ಪೂರೈಕೆಯ ಮೇಲ್ವಿಚಾರಕ ಲಾಲ್‌ಸಾಬ್, ವಾಲ್‌ಮನ್ ವಸಂತಕುಮಾರ ಮನಿಯಾರ, ಸಿಬ್ಬಂದಿ ಆಮೀರ ಅಲಿ ಮತ್ತಿತರರು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.