PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಬದುಕಿನ ವಾಸ್ತವ ಸತ್ಯವನ್ನು ಬೋಧಿಸುವುದೇ ಅರ್ಥಶಾಸ್ತ್ರ. ಅರ್ಥಶಾಸ್ತ್ರ ಉಪನ್ಯಾಸಕರು ತರಗತಿಯಲ್ಲಿ ಮಕ್ಕಳಿಗೆ ಬದುಕಿನ ವಾಸ್ತವ ಸತ್ಯವನ್ನು ಬೋಧಿಸುತ್ತಾರೆ. ಇಂದಿನ ಮಕ್ಕಳನ್ನು ಜಾಗತಿಕ ಮಟ್ಟದಲ್ಲಿ ಸ್ಪಧ ಎದುರಿಸುವಂತೆ ಸಿದ್ದತೆ ಮಾಡುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ. ಅದಕ್ಕಾಗಿ ಇಂತಹ ಉಪಗ್ರಹ ಆಧಾರಿತ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾದ ಶಿವಾನಂದ ಕಡಪಟ್ಟಿ ಹೇಳಿದರು.
 ಅವರು ಶನಿವಾರ ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕೊಪ್ಪಳ ಜಿಲ್ಲಾ ಅರ್ಥಶಾಸ್ತ್ರ ಉಪನ್ಯಾಸಕರಿಗೆ ಹಮ್ಮಿಕೊಂಡ ಉಪಗ್ರಹ ಆಧಾರಿತ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. 
ಇದೇ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘಕ್ಕೆ ಕೊಪ್ಪಳ ತಾಲೂಕಿನ ಉಪನ್ಯಾಸಕರ ಪ್ರತಿನಿಧಿಯಾಗಿ ಆಯ್ಕೆಯಾದ ರಾಜಶೇಖರ ಪಾಟೀಲ, ಕುಷ್ಟಗಿ ತಾಲೂಕಿನ ಉಪನ್ಯಾಸಕರ ಪ್ರತಿನಿಧಿಯಾಗಿ ಆಯ್ಕೆಯಾದ ಎಸ್.ಎಸ್.ಗೋಡಿ ಇವರನ್ನು ಕೊಪ್ಪಳ ತಾಲೂಕ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸನ್ಮಾನಿಸಿದರು. 
ರಾಜಶೇಖರ ಪಾಟೀಲರು ಸನ್ಮಾನ ಸ್ವೀಕರಿಸಿ ಮಾತನಾಡಿ, ಪಿ.ಯು. ಉಪನ್ಯಾಸಕರ ಎಲ್ಲಾ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಹೇಳಿದರು. ಎಸ್.ಎಸ್.ಗೋಡಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಉಪನ್ಯಾಸಕರಿಗೆ ಬಿ.ಎಡ್. ಕಡ್ಡಾಯ ಮಾಡಿರುವುದು ಸ್ವಾಗತಾರ್ಹ. ಆದರೆ ಇವರಿಗೆ ಇಲಾಖೆಯಿಂದಲೇ ಬಿ.ಎಡ್. ಮಾಡಲು ಅವಕಾಶ ನೀಡಬೇಕು ಎಂದರು.
 ಉಪನ್ಯಾಸಕರಾದ ಎಚ್.ಎಸ್.ತಿಮ್ಮಾರೆಡ್ಡಿ, ಶಿವಪ್ಪ ಬೆಲೇರಿ, ಎಚ್.ಬಿ.ಜಗ್ಗಲ್, ಸತ್ಯನಾರಾಯಣ ಕುಲಕರ್ಣಿ, ಸಿ.ಎನ್.ರಾಯಬಾಗಿ, ಕೆ.ರಾಘವೇಂದ್ರರಾವ್, ಶಾಂತಾ ಉಪನಾಳ, ಮಂಗಳಗೌರಿ, ಶಾಂತಾಬಾಯಿ ದಿವಟೆ, ಆರ್.ಎಸ್.ಸಂಗೀತಾ, ರೇಣುಕಾ ಮೇಟಿ, ಲತಾಕುಮಾರಿ ಗೌಡ, ಫಾತೀಮಾ ಹಾಗೂ ಇಲಾಖೆಯ ಸಿಬ್ಬಂದಿಯಾದ ಆರ್.ಎಚ್.ಕಾಲವಾಡ, ಕರಿಯಪ್ಪ ಕುಂಬಾರ, ಮಲ್ಲಿಕಾರ್ಜುನ ಗಂಗಾವತಿ, ಬಸವರಾಜ ಮೊರಬದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಅನಿಲಕುಮಾರ ನಿರೂಪಿಸಿದರು. ಸೋಮಶೇಖರಗೌಡ ಕೆಸರಟ್ಟಿ ಸ್ವಾಗತಿಸಿದರು. ಹನುಮಂತಪ್ಪ ಅಂಡಗಿ ಚಿಲವಾಡಗಿ ವಂದಿಸಿದರು.   

27 Jul 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top