.jpg)
ಬಿ. ರಾಂಪೂರ ಹೇಳಿದರು.

.jpg)
.jpg)
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಸ್ವಾಗತ ಕೋರಿದರು. ಪತ್ರಕರ್ತ ಹಾಗೂ ಜಾನಪದ ಕಲಾವಿದ ವೈ. ಬಿ. ಜೂಡಿ ಸಮಾರಂಭವನ್ನು ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು. ನಂತರ ನಡೆದ ನಾಟಕ ಪ್ರರ್ಶನಕ್ಕೆ ಕಿಕ್ಕಿರಿದು ಪ್ರೇಕ್ಷಕರು ಸೇರಿದ್ದರು.
ಹಿರಿಯ ರಂಗ ಕಲಾವಿದ ಬಾಬಣ್ಣ ಕಲ್ಮನಿಗೆ ಹೃದಯಸ್ಪರ್ಶಿ ಸನ್ಮಾನ, ಲಕ್ಷ ರೂ. ಹಮ್ಮಿಣಿ ಅರ್ಪಣೆ
ಕೊಪ್ಪಳ, ಜು. ೨೪ : ನಗರದ ಸಾಹಿತ್ಯಭವನದಲ್ಲಿ ಜು. ೨೧ರ ಸಂಜೆ ನಡೆದ ಸಮಾರಂಬದಲ್ಲಿ ಹಿರಿಯ ರಂಗ ಕಲಾವಿದ ಬಾಬಣ್ಣ ಕಲ್ಮನಿ ಹಾಗೂ ಅವರ ಶ್ರೀಮತಿ ಮೆಹಬೂಬಬಿ ಅವರಿಗೆ ಅಭಿಂದನ ಸಮಿತಿಯಿಂದ ಒಂದು ಲಕ್ಷ ರೂ. ಹಮ್ಮಿಣಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರದರ್ಶನಗೊಂಡ ಅಜಾತ ಶ್ರೀ ನಾಗಲಿಂಗ ಲೀಲೆ ನಾಟಕದಲ್ಲಿ ರಂಗ ನಟ ಎಂ.ಎಸ್. ಕೊಟ್ರೇಶ ನಾಗಲಿಂಗ, ಬಾಬಣ್ಣ ಕಲ್ಮನಿ ಶಿಶುನಾಳ ಶರೀಫ, ಬರಮಣ್ಣ ದಫೇದ ಗರಗದ ಮಡಿವಾಳೇಶ್ವರ, ಸಮಗಾರ ಭೀಮವ್ವನ ಪಾತ್ರಲ್ಲಿ ಅನ್ನಪೂರ್ಣ ಸಾಗರ, ಬಾಲನಾಗಲಿಂಗನಾಗಿ ಪ್ರತಾಪ ಮುಂತಾವರು ಅಭಿನಯಿಸಿದ್ದರು.
ನಾಟಕ ಪ್ರದರ್ಶನವನ್ನು ಅಭಿನಂದನ ಸಮಿತಿ ಕಾರ್ಯಾಧ್ಯಕ್ಷ ಡಾ|| ಎಂ. ಬಿ. ರಾಂಪುರ ಅವರು ಉದ್ಘಾಟಿಸಿದರು. ಸಾಹಿತಿ ಎಚ್. ಎಸ್. ಪಾಟೀಲ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಾಹಿತಿ ಎ. ಎಂ. ಮದರಿ ಅವರು ವೃತ್ತಿ ರಂಗಭೂಮಿ ಕುರಿತು ಮಾತನಾಡಿರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೆ. ಬಿ. ಬ್ಯಾಳಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಕ್ಷ್ಮೇಶ ಬಡಿಗೇರ, ಈಶ್ವರ ಹತ್ತಿ, ಮಲ್ಲಿಕಾರ್ಜುನಗೌಡ, ನಿವೃತ್ತ ತಹಶೀಲ್ದಾರ ವೆಂಕನಗೌಡ ಪಾಟೀಲ ಪಾಲ್ಗೊಂಡಿದ್ದರು. ರಂಗನಟ ಎಸ್.ಎನ್. ತಿಮ್ಮನಗೌಡ ನಿರೂಪಿಸಿದರು. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.