ತೋಟಗಾರಿಕೆ ಬೆಳೆಗಳನ್ನು ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಉತ್ಪಾದಕತೆ ಹಾಗೂ ಉತ್ಪನ್ನ ಪಡೆದು ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಆರ್ಥಿಕ ಸುಧಾರಣೆ ಹೊಂದಬಹುದಾಗಿದೆ ಎಂದು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞ ಮೂರ್ತಿ ಅವರು ಹೇಳಿದರು.
ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಅಜ್ಜಪ್ಪ ಗೌಡರ ತೋಟದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಮಾವಿನ ಮತ್ತು ಇತರ ಸಸಿಗಳನ್ನು ನೆಡುವ ವಿಧಾನ ಹಾಗೂ ಮಿಶ್ರ ಬೇಸಾಯ ಪದ್ಧತಿಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಕೊಪ್ಪಳ ಇವರ ವತಿಯಿಂದ ಏರ್ಪಡಿಸಿದ್ದ ಒಂದು ದಿನದ ರೈತರ ಕೃಷಿ ಪಾಠ ಶಾಲೆಯನ್ನು ಉದ್ದೇಶಿಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯಿಂದ ಅನೇಕ ಯೋಜನೆಗಳನ್ನು ಪರಿಚಯಿಸಲಾಗಿದೆ. ಅವುಗಳ ಸದ್ಬಳಕೆ ಮಾಡಿಕೊಂಡು ಉತಮ ಗುಣಮಟ್ಟದ ಉತ್ಪಾದನೆ ಪಡೆಯುವ ಮೂಲಕ ಕೃಷಿಯನ್ನು ಒಂದು ಉದ್ಯಮವನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ ಎಂದು ತೋಟಗಾರಿಕೆ ವಿಷಯ ತಜ್ಞ ಮೂರ್ತಿ ಅವರು ತಿಳಿಸಿದರು. ಸಂಸ್ಥೆಯ ಮೂಲ ಯೋಜನಾ ಅಧಿಕಾರಿ ಧರಣೆಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಮೂಲ ಉದ್ದೇಶಗಳ ಬಗ್ಗೆ ವಿವರಣೆ ನೀಡಿದ ಅವರು ರೈತರು ಸಣ್ಣ ಗುಂಪುಗಳಾಗಿ ರಚಿಸಿಕೊಂಡು ಸಂಸ್ಥೆಯಿಂದ ದೊರೆಯುವ ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಶವರೆಡ್ಡಿ ಅವರು ವಹಿಸಿದ್ದರು. ಗ್ರಾ.ಪಂ.ಸದಸ್ಯ ವೆಂಕಪ್ಪ ಕೊಳ್ಳಿ ಅವರು ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ.ಮಾಜಿ ಅಧ್ಯಕ್ಷ ನಿಂಗಪ್ಪ, ಗವಿಸಿದ್ದಗೌಡರು, ಬಸವನಗೌಡ ಮಾಲಿ ಪಾಟೀಲ್, ರೇವಣಸಿದ್ದಪ್ಪ ಮತ್ತು ಒಕ್ಕೂಟದ ಅಧ್ಯಕ್ಷರಾದ ಅನ್ನಪೂರ್ಣಮ್ಮ, ದೇವಮ್ಮ, ಉಪಾಧ್ಯಕ್ಷರಾದ ಶಶಿಕಲಾ ಅವರು ಭಾಗವಹಿಸಿದ್ದರು. ಸಂಸ್ಥೆಯ ಕೃಷಿ ಅಧಿಕಾರಿ ಅಂದಪ್ಪ ಸೂಡಿ, ವಲಯದ ಮೇಲ್ವಿಚಾರಕರಾದ ಅಣ್ಣಪ್ಪ ಸೇರಿದಂತೆ ಮುಂತಾದ ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು. ರೇವಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು. ಅಂದಪ್ಪ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.