
ಕೊಪ್ಪಳ ಜಿಲ್ಲೆಯಲ್ಲಿ ಡೆಸ್ಕ್‌ಗಳ ಕೊರತೆ ಇರುವ ೨೩೩ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಒಟ್ಟು ೫೩. ೧೨ ಲಕ್ಷ ರೂ. ಮೌಲ್ಯದ ೧೩೯೮ ಡೆಸ್ಕ್‌ಗಳನ್ನು ಶೇ.೮೦ ರ ಸಹಾಯಧನದೊಂದಿಗೆ ಅಂದರೆ ಕೇವಲ ೧೦. ೬೨ ಲಕ್ಷ ರೂ. ಗಳಿಗೆ ಒದಗಿಸಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಹಿಂದುಳಿದ ಹಾಗೂ ಶಿಕ್ಷಕರ ಕೊರತೆಯಿರುವ ಪ್ರಾಥಮಿಕ ಶಾಲೆಗಳಿಗೆ ಜ್ಞಾನದೀಪ ಸ್ವಯಂ ಸೇವಕ ೫೦ ಜನ ಶಿಕ್ಷಕರನ್ನು ಒದಗಿಸಲು ಸಹ ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಮಂಜೂರಾತಿ ಆದೇಶವನ್ನು ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಡಿಡಿಪಿಐ ಜಿ.ಹೆಚ್. ವೀರಣ್ಣ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ೦೪ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕೊಪ್ಪಳ ಜಿಲ್ಲೆಯನ್ನು ಆಯ್ಕೆ ಮಾಡಿ ಶೇ.೮೦ ರ ಸಹಾಯಧನದಲ್ಲಿ ಡೆಸ್ಕ್‌ಗಳನ್ನು ಒದಗಿಸಲು ಮಂಜೂರಾತಿ ನೀಡಿರುವುದಕ್ಕೆ ಹಾಗೂ ೫೦ ಜನ ಶಿಕ್ಷಕರ ಸೇವೆಯನ್ನು ಒದಗಿಸಲು ಒಪ್ಪಿಗೆಯನ್ನು ನೀಡಿರುವುದಕ್ಕೆ ಜಿಲ್ಲಾಡಳಿತ, ಜಿ.ಪಂ. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ಡಿಡಿಪಿಐ ಜಿ.ಎಚ್.ವೀರಣ್ಣ ಅವರು ಧರ್ಮಾಧಿಕಾರಿಗಳಿಗೆ ಅಭಿನಂಧನೆ ಸಲ್ಲಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.