PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ ತಾಲೂಕಿನ ಕುಣಿಕೇರಾ ಗ್ರಾಮದ ಬಾಬಾ ಅಖೀಲಾಸಾಯಿ ಜ್ಯೋತಿ ಕಾರ್ಖಾನೆ ಕಂಪನಿಯಲ್ಲಿ ಕಳ್ಳತನ ಪ್ರಕರಣ ಭೇದಿಸಿರುವ ಕೊಪ್ಪಳ ಗ್ರಾಮೀಣ ಪೊಲೀಸರು ೨೪ ಗಂಟೆಯೊಳಗಾಗಿ ಕಳ್ಳರನ್ನು ಬಂಧಿಸಿ ಕಳುವಾದ ನಗದು ಮೊತ್ತ ೪. ೧೩ ಲಕ್ಷ ರೂ. ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
  ಕಳೆದ ಏ. ೨೯ ರಂದು ರಾತ್ರಿ ಅಖೀಲಾಸಾಯಿ ಕಾರ್ಖಾನೆಯ ಆಡಳಿತದ ಕೋಣೆ ಕಿಡಕಿಯ ಗೋಡೆಯ ಒಳಗಡೆ ಪ್ರವೇಶ ಮಾಡಿದ ಕಳ್ಳರು ಟೇಬಲ್‌ನಲ್ಲಿದ್ದ ೨ ಸಾವಿರ ಬೆಲೆ ಬಾಳುವ ಬ್ರೀಫ್ ಕೇಸ್ ಹಾಗೂ ಅದರಲ್ಲಿದ್ದ ೪ ಲಕ್ಷ ೩೧ ಸಾವಿರ ರೂಪಾಯಿ ನಗದು ಹಣ ಮತ್ತು ೨ ಚೆಕ್ ಪುಸ್ತಕಗಳನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದರು.  ಈ ಕುರಿತು ಕಂಪನಿಯ ಅಕೌಂಟೆಂಟ್ ಆಗಿರುವ ಕೊಪ್ಪಳದ ನಜೀರ್ ಅಹ್ಮದ್ ಎಂಬುವವರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಳುವು ಪ್ರಕರಣದ ಬಗ್ಗೆ ಎಸ್.ಪಿ. ಮಂಜುನಾಥ ಅಣ್ಣಿಗೇರಿ ಹಾಗೂ ಡಿ.ಎಸ್.ಪಿ. ಸುರೇಶ ಬಿ.ಮಸೂತಿ ಇವರ ಮಾರ್ಗದರ್ಶನದಲ್ಲಿ ಕೊಪ್ಪಳ ಗ್ರಾಮೀಣ ವೃತ್ತದ ಸಿ.ಪಿ.ಐ. ಸತೀಶ ಎಸ್.ಪಾಟೀಲ್‌ರವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. ಮಹಾಂತೇಶ ಸಜ್ಜನ್ ಹಾಗೂ ಸಿಬ್ಬಂದಿಯೊಂದಿಗೆ ಸಿ.ಪಿ.ಐ. ಕೊಪ್ಪಳ (ಗ್ರಾ) ವೃತ್ತರವರು ತನಿಖೆಯನ್ನು ಕೈಗೊಂಡು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಶರಣಪ್ಪ  ತಂದೆ ಹನುಮಪ್ಪ ಉಪ್ಪಾರ ಹಾಗೂ ಆತನ ಸ್ನೇಹಿತನಾದ ಗ್ಯಾನಪ್ಪ ತಂದೆ ತಿಮ್ಮಣ್ಣ ನಿಂಗಾಪೂರ ಇಬ್ಬರು  ಚಿಕ್ಕಬಗನಾಳ ಗ್ರಾಮದವರನ್ನು ವಿಚಾರಣೆಗೊಳಪಡಿಸಿ, ನಂತರ ಕಳುವಾದ ೪. ೩೧ ಲಕ್ಷ ರೂ.ಗಳ ಪೈಕಿ ೪. ೧೩ ಲಕ್ಷ ರೂ.ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.. 
ಕಳುವು ಪ್ರಕರಣದ ಪತ್ತೆ ತಂಡದಲ್ಲಿ ಪೊಲೀಸ್ ಸಿಬ್ಬಂದಿಯವರಾದ ಮಲ್ಲಿಕಾರ್ಜುನ, ಅಂದಪ್ಪ, ವಿರುಪಾಕ್ಷಪ್ಪ, ರಾಜಾಸಾಬ, ಉದಯಾನಂದ, ಗವಿಸಿದ್ದಪ್ಪ, ಸುರೇಶ, ಪ್ರಸಾದ್, ಮೌಲಾಲಿ, ಶಿವಪ್ಪ ಅವರು ಭಾಗವಹಿಸಿದ್ದರು. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಶ್ಲಾಘಿಸಿದ್ದಾರೆ.

Advertisement

0 comments:

Post a Comment

 
Top