PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿ:೨೫ ಕಲೆ, ಸಂಸ್ಕೃತಿ, ರಂಗ ಆಸಕ್ತಿಯಿಲ್ಲದೆ ಇಂದಿನ ಯುವ ಪೀಳಿಗೆ ಕೇವಲ ಕ್ರಿಕೇಟ್ ಎಂಬ ಮೋಸದಾಟದಿಂದೆ ಬಿದ್ದು ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ. ಇದರಿಂದ ಮುಂದಿನ ದಿನಮಾನಗಳಲ್ಲಿ ಶ್ರಮ ಸಂಸ್ಕೃತಿಯ ರಂಜನೆ ಕೂಡ ವಿನಾಶವಾಗುವ ಕಾಲ ಸನ್ನಿಹಿತವಾಗಿದೆಯೆಂದು ಎಐಸಿಸಿಟಿಯು ರಾಜ್ಯಾದ್ಯಕ್ಷರಾದ ಜೆ.ಭಾರದ್ವಾಜ್ ಹೇಳಿದರು. 
ಅವರು ಕ್ರಾಂತಿಕಾರಿ ಯುವಜನ ಸಂಘ ಹಾಗೂ ಸ್ಲಂ ಜನರ ಸಾಂಸ್ಕೃತಿಕ ಪ್ರತಿಭಾ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಬಸಾಪಟ್ಟಣದಲ್ಲಿ ಆರಂಭವಾದ ಹತ್ತು ದಿನಗಳ ಉಚಿತ ಬೇಸಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ದಿನದಿಂದ ದಿನಕ್ಕೆ ಯುವಜನರಲ್ಲಿ ರಂಗಾಸಕ್ತಿ ಮತ್ತು ಗ್ರಾಮೀಣ ಕ್ರೀಡೆಗಳು ಮಾಯವಾಗಿ ಕೇವಲ ವಿದೇಶ ಸಂಸ್ಕೃತಿಯ ಕ್ರೀಡಾ ಮನೋಭಾವನೆ ಮತ್ತು ಸಾಂಸ್ಕೃತಿ ಹೆಚ್ಚಾಗುತ್ತಿರುವುದು ಅಪಾಯಕಾರಿ ಸಂಗತಿಯೆಂದು ಹೇಳಿದರು  
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿಕೊಂಡಿದ್ದ ಕರ್ನಾಟಕ ಸ್ಲಂ ಜನಾಂದೋಲನ ರಾಜ್ಯ ಸಂಚಾಲಕರಾದ ಎ. ನರಸಿಂಹ ಮೂರ್ತಿ ಮಾತನಾಡುತ್ತ ಸ್ಲಂ ಯುವಕರಲ್ಲಿ ಕ್ರಿಯಾಶೀಲತೆ ಮತ್ತು ರಂಗಾಸಕ್ತಿ ಹೆಚ್ಚಿದ್ದು ಅಂತವರಿಗೆ ಇಂತಹ ಉಚಿತ ರಂಗ ತರಬೇತಿ ಮತ್ತಷ್ಟು ರಂಗಾಸಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತವೆ. ಅದಕ್ಕಾಗಿ ನಗರದ ಕೊಳಗೇರಿ ಯುವಜನಾಂಗಕ್ಕೆ ಇನ್ನು ಇನ್ನು ತರಬೇತಿಗಳು ನೀಡಬೇಕು ಅವರಲ್ಲಿರುವ ಕಲೆ ಪ್ರತಿಭೆಗಳನ್ನು ಸಮಾಜಕ್ಕೆ ಅಭಿವ್ಯಕ್ತಿಪಡಿಸಲು ಉತ್ತಮ ವೇದಿಕೆ ನಿರ್ಮಾಣವಾಗಬೇಕೆಂದು ಕರೆ ನೀಡಿದರು.
ಸಾಹಿತಿ ಹರಿನಾಥ ಬಾಬು ಅವರು ಅತಿಥಿ ಸ್ಥಾನವಹಿಸಿಕೊಂಡು ರಂಗಭೂಮಿಯ ಸಾಹಿತ್ಯ ಒಂದು ವಿಶೇಷ ಮತ್ತು ಎಲ್ಲ ಸಮುದಾಯಗಳನ್ನು ಸೆಳೆದುಕೊಳ್ಳುವ ಶಕ್ತಿಯಿದೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ರಂಗ ಸಂಸ್ಕೃತಿ ನೇಪತ್ಯಕ್ಕೆ ಸರಿದಿದ್ದು ಹಾಗಾಗಿ ರಂಗಕಲೆ ಮತ್ತು ಪ್ರದರ್ಶನಗಳು ದೀಪ ಹಚ್ಚಿ ಹುಡುಕುವ ಸ್ಥಿತಿಗೆ ಬಂದಿದೆ ಎಂದು ನುಡಿದರು. ವೇದಿಕೆ ಮೇಲೆ ಶಿವಶಂಕರ ಮತ್ತು ಹೊಸಪೇಟೆಯ ರಾಮಚಂದ್ರ ಉಪಸ್ಥಿತರಿದ್ದರು. ಆರಂಭದಲ್ಲಿ ರಂಗ ಸಂಚಾಲಕರಾದ ಅಲ್ಲಾಗಿರಿರಾಜ್ ಕನಕಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು.    
ರಂಗ ಸಂಚಾಲಕರಾದ ಚಿದಾನಂದಕೀರ್ತಿ ಸ್ವಾಗತಿಸಿದರು ಟಿ. ರಾಘವೇಂದ್ರ ವಂದಿಸಿದರು. ಐಸಾ ಹೆಚ್. ಪರಮೇಶ್ವರ ನಿರೂಪಿಸಿದರು. ನಂತರ ಹತ್ತು ದಿನಗಳಕಾಲ ಜರುಗಿದ ಉಚಿತ ರಂಗತರಬೇತಿ ಶಿಬಿರದ ಶಿಬಿರಾರ್ಥಿಗಳಿಂದ ನಾವ್ಯಾಕೆ ಹಿಂಗಿದಿವೀ ಎನ್ನುವ ನಾಟಕ ಪ್ರದರ್ಶನ ಮಾಡಲಾಯಿತು. 

25 May 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top