PLEASE LOGIN TO KANNADANET.COM FOR REGULAR NEWS-UPDATES


ಕುಮಾರಸ್ವಾಮಿಯವರ ತತ್ವ ಸಿದ್ಧಾಂತ ಮೆಚ್ಚಿ ಜೆಡಿಎಸ್‌ಗೆ ಸೇರ್ಪಡೆಯಾದೆ: ಶೀಲ್ಪಾ ಸುಗಮದವರ
ಕೊಪ್ಪಳ, ಮೇ.೦೨: ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಜನಪರ ಕಾರ್ಯ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಮೆಚ್ಚಿ ಇಂದು ನಮ್ಮ ಬೆಂಬಲಿಗರೊಂದಿಗೆ ಬಿಎಸ್‌ಆರ್ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿರುವದಾಗಿ ಶೀಲ್ಪಾ ಬಾಲಚಂದ್ರ ಸುಗಮದವರ ಹೇಳಿದರು.
ಅವರು ಗುರುವಾರ ನಗರದ ಒಂದನೇ ವಾಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ರವರ ಬಹಿರಂಗ ಪ್ರಚಾರದಲ್ಲಿ ಅಭ್ಯರ್ಥಿಯ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗೊಂಡರು. ಶೀಲ್ಪಾ ಸುಗಮದವರ ಕಳೆದ ನಗರಸಭೆ ಚುನಾವಣೆಯಲ್ಲಿ ಒಂದನೇ ವಾರ್ಡಿನಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಪರಾಭವಗೊಂಡಿದ್ದರು. ಜೆಡಿಎಸ್ ಸೇರ್ಪಡೆ ನಂತರ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ನಮ್ಮೇಲ್ಲಾ ಬೆಂಬಲಿಗರು ಹಾಗೂ ವಾರ್ಡಿನ ಸಮಸ್ಥ ಜನತೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಕವಲೂರುಗೌಡ್ರಗೆ ಬೆಂಬಲಿಸಿ ಅಭಿವೃದ್ಧಿ ಕಾರ್ಯಗಳನ್ನು ನಿಂತು ನೋಡಿರಿ. ಕ್ಷೇತ್ರದ ಅಭಿವೃದ್ಧಿ ಎಂದರೇ ಕವಲೂರಗೌಡ್ರ ಎಂಬಂತೆ ಮಾಡಿ ತೋರಲಿದ್ದಾರೆ ಎಂದು ಅವರಿಲ್ಲಿ ತಿಳಿಸಿದರು. 
ಇದೇ ವೇಳೆ ಜೆಡಿಎಸ್ ಹಿರಿಯ ಮುಖಂಡ ಎಂ.ಡಿ. ಹುಸೇ


ನ್‌ಮಾಸ್ಟರ್ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸೈದ್ಯಾಂತೀಕ ತತ್ವ ಸಿದ್ಧಾಂತಗಳಿವೆ. ಅದೇ ರೀತಿ ನಮ್ಮ ಪಕ್ಷದ ನಾಯಕರು ಮಹತ್ವ ಪೂರ್ಣ ಯೋಜನೆ ಹಾಗೂ ಉದ್ದೇಶಗಳು ಅಷ್ಟೋಂದು ಫಲಪ್ರದವಾಗಿರುತ್ತವೆ. ಅದೇ ರೀತಿ ನಮ್ಮ ಅಭ್ಯರ್ಥಿ ಕವಲೂರು ಗೌಡ್ರ ಅತ್ಯಂತ ಸರಳ, ಸಜ್ಜನಿಕೆಯ, ನಿಷ್ಟೆ, ಪ್ರಾಮಾಣಿಕ ವ್ಯಕ್ತಿಯಾಗಿದ್ದು ಜನತೆ ಇವರ ಬಗ್ಗೆ ಅರಿತು ಬಹುಮತ ನೀಡುವಂತೆ ಅವರಿಲ್ಲಿ ಮನವಿ ಮಾಡಿದರು. 

ನಗರದಲ್ಲಿ ಪ್ರಚಾರ : 
ಇಂದು ನಗರದ ಒಂದನೇ ವಾರ್ಡಿನ ಶಿರಸಪ್ಪಯ್ಯನ ಮಠದಲ್ಲಿ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್ ವಿಶೇಷ ಪೂಜೆ ನೆರವೇರಿಸಿ ಒಂದನೇ ವಾರ್ಡಿನಿಂದ ನಗರದ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್,ಜೆಡಿಎಸ್ ಯುವಘಟಕದ ಜಿಲ್ಲಾಧ್ಯಕ್ಷ ಸಿ.ಹೆಚ್.ರಮೇಶ, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಚಂದ್ರಶೇಖರಗೌಡ್ರ ವಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ಚನ್ನಪ್ಪ ಟೆಂಗಿನಕಾಯಿ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top