ಕೊಪ್ಪಳ : ಎದೆಯ ಮಾತು ಯಾವುದೇ ಆಡಂಬರವಿಲ್ಲದೆ ನೇರವಾಗಿ ಬರುವಂತಹದ್ದು,ಎದೆಯ ಪಿಸುಮಾತುಗಳನ್ನು ಬರೆಯಬಲ್ಲವನು ಗಜಲ್ ಕವಿಯಾಗಬಲ್ಲ. ರಂಜನೀಯ ಪದಗಳನ್ನು ಉಪಯೋಗಿಸದೆ ಬರೆದಾಗ ಗಜಲ್ ಮನಮುಟ್ಟತ್ತದೆ. ಗಜಲ್ ವಿಶ್ವವ್ಯಾಪಿಯಾಗಿರುವಂತಹದ್ದು. ಪರ್ಶಿಯನ್, ಅರಬ್ಬಿ. ಉರ್ದು,ಹಿಂದಿಗಳಲ್ಲಿ ಅತ್ಯುತ್ತಮ ಗಜಲ್ ಕಾವ್ಯ ಮೂಡಿಬಂದಿದೆ. ಕನ್ನಡ ಗಜಲ್ ಗಳಲ್ಲಿ ಪರ್ಶಿಯನ್, ಅರಬ್ಬಿ. ಉರ್ದು,ಹಿಂದಿ ಪದಗಳನ್ನು ಬಳಸುವುದರಿಂದ ಗಜಲ್ ದೊಡ್ಡ ಶಕ್ತಿ ಬರುತ್ತದೆ ಎಂದು ಗಜಲ್ ಕವಿ ಅಲ್ಲಾಗಿರಿರಾಜ್ ಹೇಳಿದರು.

ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೫೦ನೇ ಕವಿಸಮಯದಲ್ಲಿ ಮಾತನಾಡುತ್ತಿದ್ದರು. ಗಜಲ್‌ನ ಇತಿಹಾಸ, ವರ್ತಮಾನದ ಕುರಿತು ಮಾತನಾಡಿದ ಅಲ್ಲಾಗಿರಿರಾಜ್ ಗಜಲ್ ಬರೆಯುವವರು ದ್ವಿಪದಿಗಳಿಂದ ಆರಂಬಿಸಬೇಕು. ಬರವಣಿಗೆ ರೂಡಿಯಾದಂತೆ ಸುಂದರ ಗಜಲ್ ಮೂಡಿಬರುತ್ತದೆ. ಇಂಗ್ಲಿಷ್ ಪದಗಳನ್ನು ಗಜಲ್ ನಲ್ಲಿ ಬಳಸಬೇಡಿ ಎಂದು ಹೇಳಿದ ಅಲ್ಲಾಗಿರಿರಾಜ್ ಗಜಲ್ ನ ರಚನೆಯ ಕುರಿತು ಮಾತನಾಡಿದರು.

ಇದಕ್ಕೂ ಮೊದಲು ನಡೆದ ಗಜಲ್ ಗೋಷ್ಠಿಯಲ್ಲಿ ಶಾಂತಾದೇವಿ ಹಿರೇಮಠ,ಪುಷ್ಪಲತಾ ಏಳುಬಾವಿ,ಗಾಯತ್ರಿ ಭಾವಿಕಟ್ಟಿ, ಅನಸೂಯಾ ಜಾಗೀರದಾರ,ವಿಜಯಲಕ್ಷ್ಮಿ ಕೊಟಗಿ,ಅರುಣಾ ನರೇಂದ್ರ, ಸಿರಾಜ್ ಬಿಸರಳ್ಳಿ,ಬಸವರಾಜ ಸಂಕನಗೌಡರ ಗಜಲ್ ವಾಚನ ಮಾಡಿದರು. ಮಾನಪ್ಪ ಬೆಲ್ಲದ,ರಮೇಶ ಬನ್ನಿಕೊಪ್ಪ,ಎನ್.ಜಡೆಯಪ್ಪ,ಡಾ.ಬಸವರಾಜ ಕುಂಪಾ,ಎ.ಪಿ.ಅಂಗಡಿ,ಜಿ.ಎಸ್.ಬಾರಕೇರ,ಶ್ರೀನಿವಾಸ ಚಿತ್ರಗಾರ ಚಿದಾನಂದ ಕೀರ್ತಿ,ಎಸ್.ದಾನಕೈ,ವೀರಣ್ಣ ಹುರಕಡ್ಲಿ ಕವನ ವಾಚನ ಮಾಡಿದರು.
೧೫೦ನೇ ಕವಿಸಮಯದ ನಿಮಿತ್ಯ ಸಿಹಿ ಹಾಗೂ ಸ್ಮರಣಫಲಕಗಳನ್ನು ವಿತರಿಸಲಾಯಿತು.ರಾಜಶೇಖರ ಅಂಗಡಿ,ಜಿ.ಎಸ್.ಗೋನಾಳ,ಶಿವಾನಂದ ಹೊದ್ಲೂರ,ಚಂದ್ರು ಕನಕಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತ ಮಾಡಿದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರೆ ಎನ್.ಜಡೆಯಪ್ಪ ವಂದನಾರ್ಪಣೆ ಮಾಡಿದರು.
0 comments:
Post a Comment
Click to see the code!
To insert emoticon you must added at least one space before the code.