ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೧೩ ರಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ವೆಚ್ಚಗಳ ವಿವರಗಳನ್ನು ಜೂ. ೦೭ ರೊಳಗಾಗಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸೂಚನೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ಫಲಿತಾಂಶ ಘೋಷಿಸಿದ ನಂತರ ೩೦ ದಿನಗಳ ಒಳಗಾಗಿ ಚುನಾವಣಾ ವೆಚ್ಚಗಳ ವಿವರಗಳನ್ನು ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಬೇಕಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಚುನಾವಣೆಗೆ ಸಂಬಂಧಿಸಿದಂತೆ ಎ.ಬಿ.ಸಿ. ರಜಿಸ್ಟರ್‌ಗಳು, ಎಲ್ಲಾ ವೆಚ್ಚಗಳ ವೋಚರ್‌ಗಳು, ಅನೆಕ್ಷರ್-೧೫, ಅಫಿಡೆವಿಟ್, ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಚುನಾವಣಾಧಿಕಾರಿಗಳು ನೀಡಿರುವ ನೋಟಿಸ್ ಪ್ರತಿ ಮತ್ತು ಅದಕ್ಕೆ ಅಭ್ಯರ್ಥಿ ಸಲ್ಲಿಸಿರುವ ಉತ್ತರಗಳ ವಿವರಗಳನ್ನು ಮೂಲ ಪ್ರತಿಗಳಲ್ಲಿ ಅಭ್ಯರ್ಥಿಯ ಸಹಿಯೊಂದಿಗೆ ಆಯಾ ತಹಸಿಲ್ದಾರರ ಕಚೇರಿಯ ಅಕೌಂಟಿಂಗ್ ತಂಡ/ ವಿಧಾನಸಭಾ ಕ್ಷೇತ್ರಗಳಿಗೆ ನೇಮಿಸಿದ ಸಹಾಯಕ ವೆಚ್ಚ ವೀಕ್ಷಕರಲ್ಲಿ ಪರಿಶೀಲಿಸಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಜೂ. ೦೭ ರ ಒಳಗಾಗಿ ಸಲ್ಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.

0 comments:
Post a Comment
Click to see the code!
To insert emoticon you must added at least one space before the code.