ಕೊಪ್ಪಳ, ಏ.೩೦: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೇ ಈ ಬಾರಿ ರಾಜ್ಯದ ಮುಖ್ಯಮಂತ್ರಿಯಾಲಿದ್ದಾರೆ ಎಂದು ಕರವೇ ತಾಲೂಕಾಧ್ಯಕ್ಷ ವಿಜಯಕುಮಾರ ಭವಿಷ್ಯ ನುಡಿದರು.
ಅವರು ಮಂಗಳವಾರ ತಾಲೂಕಿನ ಹೀರೆ ಕಾಸನಕಂಡಿ ಗ್ರಾಮದ ಹರಿಜನ ಕೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ನಮ್ಮ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿ ಪಾಟೀಲ್ ಕವಲೂರಗೌಡ್ರ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ನಮ್ಮ ಸಮಾಜದ ಜನತೆ ಸಾಕಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ನಮ್ಮೆಲ್ಲಾ ಸಮಾಜದ ಹಾಗೂ ಸಂಬಂಧಿತರ ಮತಗಳು ಜೆಡಿಎಸ್ ಪಕ್ಷಕ್ಕೆ ಮಿಸಲಾಗಿರಲಿ ಎಂದು ಅವರಿಲ್ಲಿ ಕರೆ ನೀಡಿದರು.
ಕುಮಾರಸ್ವಾಮಿಯವರ ಜನಪರ ಕಾರ್ಯಗಳನ್ನು ಗೌಡರು ನಮ್ಮ ಮನೆ ಬಾಗಿಲಿಗೆ ತಂದು ತಲುಪಿಸಲಿದ್ದಾರೆ.
ಇದೇ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಎಲ್ಲಾ ಸಮಾಜದರಿಗೆ ಪ್ರೋತ್ಸಾಹ ಹಾಗೂ ಸೂಕ್ತ ಸ್ಥಾನಮಾನ ನೀಡಿದೆ ಅದರಂತೆ ಮುಂದೆಯೂ ಪಕ್ಷದ ನಿಷ್ಠಾವಂತರಿಗೆ ಸೂಕ್ತ ಸ್ಥಾನಮಾನ ನೀಡಲಿದೆ ಎಂದರು.
ಸೇರ್ಪಡೆ: ಗುಡದಪ್ಪ, ಬಸವರಾಜ, ನಿಂಗಪ್ಪ, ಸಣ್ಣ ನಿಂಗಪ್ಪ, ಮಂಜುನಾಥ, ರೇವಪ್ಪ, ಭೀಮಪ್ಪ, ಪಕೀರಪ್ಪ, ಜುಂಜಪ್ಪ, ಸಿದ್ದಪ್ಪ ಚೇರಮನ್ ಸೇರಿದಂತೆ ಅನೇಕ ದಲಿತ ಮುಖಂಡರು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ರಮೇಶ ಹದ್ಲಿ, ಸೋಮಶೇಖರ, ದೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.