ಕೊಪ್ಪಳ, ಏ.೨೮: ಕಾಂಗಸ್ ಮತ್ತು ಬಿಜೆಪಿ ಪಕ್ಷದವರು ಜಾತಿ ಮುಖಂಡರನ್ನು ಮುಂದಿಟ್ಟುಕೊಂಡು ಮತ ಕೇಳಲು ಆಗಮಿಸುತ್ತಿದ್ದಾರೆ ಆದರೆ ನಾವು ಜಾತ್ಯಾತೀತ ಪಕ್ಷದಲ್ಲಿದ್ದು ನಮ್ಮ ಪಕ್ಷಕ್ಕೆ ಕ್ಷೇತ್ರದ ಜನತೆ ಯಾವುದೇ ಜಾತಿಭೇದ ಮಾಡದೇ ಜಾತ್ಯಾತೀತವಾಗಿ ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ ಹೇಳಿದರು.
ಅವರು ರವಿವಾರ ತಾಲೂಕಿನ ಮಾದಿನೂರು ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ನಮಗೆ ಜಾತಿ ಮುಖ್ಯವಲ್ಲ ಕ್ಷೇತ್ರದ ಅಭಿವೃದ್ಧಿಗೆ ಹೊಸತನದ ಪರ್ಯಾಯ ಅಭ್ಯರ್ಥಿಗೆ ಬೆಂಬಲಿಸಬೇಕಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ದುರಾಢಳಿತ ಈಡೀ ಕ್ಷೇತ್ರದ ಜನತೆಗೆ ಗೊತ್ತಿದೆ ಅದನ್ನು ಬಣ್ಣಿಸುವ ಅಗತ್ಯತೇ ಇಲ್ಲ. ಮತದಾರರೆಲ್ಲಾ ಓಂದೇ ಜಾತಿ ಅದುವೇ ಮಾನವ ಜಾತಿ ಎಂದು ನಂಬಿರುವ ನಮ್ಮ ಪ್ರದೀಪಗೌಡ್ರ ಹಿಂದೆ ಹಾಗೆ ನಡೆದುಕೊಂಡು ಬಂದಿದ್ದಾರೆ. ಮುಂದೆಯೂ ಅವರೂ ಹಾಗೇಯೇ ನಡೆದುಕೊಳ್ಳಲಿದ್ದಾರೆ ಎಂಬ ಭರವಸೆ ನಮಗಿದೆ ಹಾಗಾಗೀ ಕ್ಷೇತ್ರದ ಜನತೆ ಗೌಡ್ರಗೆ ಜಾತ್ಯಾತೀತವಾಗಿ ಬೆಂಬಲಿಸವಂತೆ ಅವರಿಲ್ಲಿ ಮನವಿ ಮಾಡಿದರು.
ಇದೇ ವೇಳೆ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ನಮ್ಮ ಮನೆತನ ಯಾವುದೇ ಜಾತಿ ಎಂದು ಪರಿಗಣಿಸದೇ ಎಲ್ಲಾ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವದಲ್ಲದೇ ಅದೇ ರೀತಿಯ ಸಹಾಯ ಮಾಡುತ್ತ ಇಗಲು ಮುಂದುವರೆಸಿಕೊಂಡು ಬಂದಿದ್ದೇವೆ ಎಂದರು. ಜನತೆ ಜಾತಿಮತ ಮರೆತು ನಿಮ್ಮೆಲ್ಲರ ಸೇವೆಯ ಕನಸ್ಸು ಹೊತ್ತಿರುವ ನನಗೆ ಬೆಂಬಲಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಡಿ. ಹುಸೇನ್ ಮಾಸ್ಟರ್, ಟಿ.ಟಿ. ಪಾಟೀಲ್, ಗಾಳೆಪ್ಪ ಕಡೆಮನಿ, ಹನುಮೇಶ, ರಮೇಶ, ಬಸಪ್ಪ, ವಿರುಪಾಕ್ಷಗೌಡ, ಪ್ರಭು ಬಬ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.