PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ:  ಸರ್ಕಾರಿ ನೌಕಕರ ಪಾಲಿಗೆ ನಿವೃತ್ತಿಯು ಶುಭಕರವಾದ ಸಂಕೇತವೆಂದೇ ತಿಳಿದುಕೊಳ್ಳಬೇಕು. ಏಕೆಂದರೆ ತಮ್ಮ ಸುಧೀರ್ಘವಾದ  ಅವಧಿಯಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೇ ಪ್ರಾಮಾಣಿಕವಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ  ಯಶಸ್ಸು ಗಳಿಸಿರುತ್ತಾರೆ.   ನಿಜವಾದ ವಿಶ್ರಾಂತಿಯನ್ನು ನಿವೃತ್ತಿಯ ನಂತರ ಪಡೆದುಕೊಳ್ಳಬೇಕೆಂದು ಪ್ರಾಚಾರ್ಯ ಎಸ್.ಎಲ್.ಮಾಲೀಪಾಟೀಲ ನುಡಿದರು. ಅವರು ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ  ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅಶೋಕ ಲೋಕಾಪುರ ಹಾಗೂ ದೈಹಿಕ ನಿರ್ದೇಶಕರಾದ ಎಂ.ಅರ್.ಹವಳದ  ಇವರ ನಿವೃತ್ತಿಯ ನಿಮಿತ್ಯ ಹಮ್ಮಿಕೊಂಡಿದ್ದ ಬೀಳ್ಕೊಡುಗೆಯ  ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  ಮುಂದುವರಿದು ಮಾತನಾಡಿದ ಅವರು ನಮ್ಮ ಮಹಾವಿದ್ಯಾಲಯದಲ್ಲಿ  ೩೪ ವರ್ಷಗಳವರೆಗೆ ಸೇವೆಯನ್ನು ಸಲ್ಲಿಸಿದ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅಶೋಕ ಲೋಕಾಪುರರ ಜೀವನ ತುಂಬಾ ಶಿಸ್ತು ಮತ್ತು ಕ್ರಮಬದ್ದವಾಗಿತ್ತು. ಅಪಾರ ಅನುಭವದೊಂದಿಗೆ ವಿಷಯ ಪರಿಣಿತಿಯಿಂದ ಪಾಠ ಮಾಡಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು ಹಾಗೂ ದೈಹಿಕ ನಿರ್ದೇಶಕರಾದ ಎಂ.ಅರ್.ಹವಳದರು ಶಿಸ್ತು, ಕ್ರಮಬದ್ದ ಜೀವನ ನಡೆಸಿ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಅಭಿರುಚಿ ಬೆಳೆಸಿ ಅವರನ್ನು ಪ್ರೋತ್ಸಾಹಿಸಿ ಹಲವಾರು ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ. ಇವರಿಂದ ನಮ್ಮ ಮಹಾವಿದ್ಯಾಲಯದ ಕೀರ್ತಿ ರಾಜ್ಯಮಟ್ಟಕ್ಕೆ ಹರಡುವಲ್ಲಿ ಸಹಾಯಕವಾಗಿದೆ. ಇವರೀರ್ವರು  ಮಹಾವಿದ್ಯಾಲಯದ ಅಭಿವೃದ್ಧಿಗಾಗಿ  ಸಾಕಷ್ಟು ಶ್ರಮಿಸಿದ್ದಾರೆ. ನಿವೃತ್ತಿಯನಂತರ ಅವರ ಬದುಕು ಸೊಗಸಾಗಿರಲಿ ಎಂದು ಹಾರೈಸಿದರು.  ವೇದಿಕೆಯ ಮೇಲೆ ಉಪಸ್ಥಿತರಿದ್ದ ನಿವೃತ್ತಿಗೊಂಡ ಪ್ರೊ.ಅಶೋಕ ಲೋಕಾಪುರ ಹಾಗೂ ಪ್ರೊ.ಎಂ.ಅರ.ಹವಳದ ಮಾತನಾಡಿ ಪ್ರಾಮಾಣಿಕ ಸೇವೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗೆ ನೀಡಿದ್ಧೇವೆ. ನಮ್ಮೊಂದಿಗೆ ಸಹಕಾರ ಮಾಡಿದ ಎಲ್ಲ ಪ್ರಾಧ್ಯಾಪಕ ಹಾಗೂ ಸಿಬ್ಭಂಧಿಗಳಿಗೆ ನಾವು ಚಿರ ರುಣಿಯಾಗಿರುತ್ತೇವೆ ಎಂದರು. ವೇದಿಕೆಯ ಮೇಲೆ ಪ್ರೊ.ಪರೀಕ್ಷಿತರಾಜ ಉಪಸ್ಥಿತರಿದ್ದರು. ಪ್ರಾಧ್ಯಪಕ ಬಳಗವು ನಿವೃತ್ತಿಗೊಂಡವರ ಕುರಿತು ಮಾತನಾಡಿದರು. ಡಾ.ಬಸವರಾಜ ಪೂಜಾರ ನಿರೂಪಿಸಿದರು. ಡಾ.ದಯಾನಂದ ಸಾಳಂಕಿ ವಂದಿಸಿದರು.

30 Apr 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top