ಅಡಿಗಲ್ಲು ಸಮಾರಂಭದ ಶಿಲಾನ್ಯಾಸವನ್ನು ಗವಿಸಿದ್ದೇಶ್ವರ ಮಹಾಸ್ವಾಮಿಗಳು ನೆರವೇರಿಸಿ " ಸಂಸ್ಥೆಯ ಅಧ್ಯಕ್ಷರಾದ ರಾಜಾಬಕ್ಷಿ ಎಚ್.ವಿಯವರ ಸಾಹಸ ಮೆಚ್ಚುವಂಥಹದ್ದು. ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರಾಜಾಬಕ್ಷಿ ನಿರಂತರ ಪರಿಶ್ರಮ ಜೀವಿ. ಅವರ ನಿರಂತರ ಶ್ರಮದಿಂದ ಸಂಸ್ಥೆಯು ಇಂದು ಈ ಹಂತ ತಲುಪಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಾಣಲಿ ಅದಕ್ಕೆ ಗವಿಸಿದ್ದೇಶ್ವರನ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಿದರು
ಜಾಕೀರ ಕುಕನೂರ,ವೀರಭದ್ರಪ್ಪ ಗಂಜಿ,ಫಹಿಂ ಬಾಷಾ ಹಾಗೂ ಗಣರಾಜ್ಯೋತ್ಸವದ ಪರೇಡ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಕಿನ್ನಾಳ ಚಿತ್ರಗಾರ ಸಮಾಜದ ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್‍ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು,ಕರಾಟೆ ಪ್ರದರ್ಶನ ನಡೆಯಿತು. ಕಾರ್‍ಯಕ್ರಮದ ನಿರೂಪಣೆಯನ್ನು ಬಸವರಾಶ ಯರಾಶಿ,ಸ್ವಾಗತವನ್ನು ಕಾಮಾಕ್ಷಿ ಮಾಡಿದರೆ ವಂದನಾರ್ಪಣೆಯನ್ನು ಶರಣ್ ರಡ್ಡಿ ಮಾಡಿದರು.
0 comments:
Post a Comment
Click to see the code!
To insert emoticon you must added at least one space before the code.