ವಿಧಾನಸಭೆ ಚುನಾವಣೆ ;ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ ?
ಕೊಪ್ಪಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಕರಡಿ ಸಂಗಣ್ಣ ಸ್ಪರ್ದಿಸುವುದು ಖಚಿತವಾಗಿದ್ದು ಇಲ್ಲಿಯವರೆಗಿನ ಊಹಾಪೂಹಗಳಿಗೆ ತೆರೆಬಿದ್ದಿದೆ.
ಕೊಪ್ಪಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಕರಡಿ ಸಂಗಣ್ಣ ಸ್ಪರ್ದಿಸುವುದು ಖಚಿತವಾಗಿದ್ದು ಇಲ್ಲಿಯವರೆಗಿನ ಊಹಾಪೂಹಗಳಿಗೆ ತೆರೆಬಿದ್ದಿದೆ.
ಬೆಂಗಳೂರು, ಮಾ.25: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯು ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸಿದ್ದು, ಶೀಘ್ರವೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಗಳಿವೆ.

ರಾಜುಗೌಡ, ಬೇಳೂರು ಗೋಪಾಲಕೃಷ್ಣ, ಮಾನಪ್ಪವಜ್ಜಲ್, ಪ್ರತಾಪ್ ಗೌಡ ಪಾಟೀಲ್, ವಿ.ಸೋಮಣ್ಣ, ಶಿವರಾಜ್ ತಂಗಡಗಿ, ನಂಜುಂಡ ಸ್ವಾಮಿ, ರೇವೂ ನಾಯಕ್ ಬೆಳಮಗಿ, ಚಂದ್ರಕಾಂತ್ ಬೆಲ್ಲದ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ ಮತ್ತು ರೇಣುಕಾಚಾರ್ಯ ಹೆಸರುಗಳನ್ನು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂದು ಹೇಳಲಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿನಿಧಿಸುತಿದ್ದ ಶಿಕಾರಿಪುರ ಸೇರಿದಂತೆ, ಬಿಜೆಪಿ ತೊರೆದು ಈಗಾಗಲೆ ಕೆಜೆಪಿಗೆ ಸೇರ್ಪಡೆಗೊಂಡಿರುವವರ ಕ್ಷೇತ್ರಗಳಲ್ಲೂ ಹೊಸಬರಿಗೆ ಮಣೆ ಹಾಕಬೇಕಾಗಿದೆ. ಅಲ್ಲದೆ, ಭೂ ಹಗರಣದಲ್ಲಿ ಸಿಲುಕಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಕೆಜಿಎಫ್ ಶಾಸಕ ವೈ.ಸಂಪಗಿಗೆ ಬಿಜೆಪಿ ಟಿಕೇಟ್ ಸಿಗುವುದರಲ್ಲಿ ಅನುಮಾನವಿದೆ ಎನ್ನಲಾಗಿದೆ.
ಬಿಜೆಪಿ ರಾಜ್ಯ ಘಟಕದ ನಾಯಕರು ಈಗಾಗಲೆ 19 ಜಿಲ್ಲೆಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ: ಚಿಕ್ಕಮಗಳೂರು-ಸಿ.ಟಿ.ರವಿ, ತರೀಕೆೆ-ಅವಿನಾಶ್, ಶೃಂಗೇರಿ-ಡಿ.ಎನ್. ಜೀವರಾಜ್, ಮೂಡಿಗೆರೆ (ಮೀಸಲು)-ಎಂ.ಪಿ.ಕುಮಾರಸ್ವಾಮಿ.
ಶಿವಮೊಗ್ಗ ಜಿಲ್ಲೆ: ಶಿವಮೊಗ್ಗ-ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಗ್ರಾಮಾಂತರ (ಮೀಸಲು)-ಕೆ.ಜಿ.ಕುಮಾರಸ್ವಾಮಿ, ತೀರ್ಥಹಳ್ಳಿ-ಆರಗ ಜ್ಞಾನೇಂದ್ರ. ಬಾಗಲಕೋಟೆ ಜಿಲ್ಲೆ: ಬಾದಾಮಿ-ಮಹಾಗುಂಡಪ್ಪಕಳ್ಳಪ್ಪ ಪಟ್ಟಣಶೆಟ್ಟಿ, ಬಾಗಲಕೋಟೆ-ವೀರಣ್ಣ ಚರಂತಿಮಠ, ಜಮಖಂಡಿ-ಶ್ರೀಕಾಂತ ಕುಲಕರ್ಣಿ, ತೇರದಾಳ-ಸಿದ್ದು ಸವದಿ, ಮುಧೋಳ(ಎಸ್.ಸಿ)-ಗೋವಿಂದ ಎಂ.ಕಾರಜೋಳ.
ಬೆಂಗಳೂರು ನಗರ: ಬೆಂಗಳೂರು ದಕ್ಷಿಣ-ಎಂ.ಕೃಷ್ಣಪ್ಪ,ಬಸವನಗುಡಿ- ರವಿಸುಬ್ರಹ್ಮಣ್ಯ, ಸಿ.ವಿ.ರಾಮನ್ ನಗರ(ಮೀಸಲು) - ಎಸ್.ರಘು, ದಾಸರಹಳ್ಳಿ- ಎಸ್.ಮುನಿರಾಜು, ಜಯನಗರ-ಬಿ.ಎನ್.ವಿಜಯ್ ಕುಮಾರ್, ಕೆ.ಆರ್.ಪುರಂ- ಎನ್.ಎಸ್.ನಂದೀಶ್ ರೆಡ್ಡಿ, ಮಹದೇವಪುರ(ಮೀಸಲು)-ಅರವಿಂದ ಲಿಂಬಾವಳಿ, ಮಲ್ಲೇಶ್ವರಂ-ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಪದ್ಮನಾಭನಗರ-ಆರ್.ಅಶೋಕ್.
ರಾಜಾಜಿನಗರ-ಎಸ್.ಸುರೇಶ್‌ಕುಮಾರ್, ರಾಜರಾಜೇಶ್ವರಿನಗರ-ಎಂ.ಶ್ರೀನಿವಾ ಸ್, ಯಲಹಂಕ-ಎಸ್.ಆರ್.ವಿಶ್ವನಾಥ್, ಆನೇಕಲ್(ಮೀಸಲು)-ಎ.ನಾರಾಯಣ ಸ್ವಾಮಿ, ನೆಲಮಂಗಲ-ಎಂ.ವಿ.ನಾಗರಾಜ್.
ಬೆಳಗಾವಿ ಜಿಲ್ಲೆ:ಅರಬಾವಿ-ಬಾಲಚಂದ್ರ ಜಾರಕಿಹೊಳಿ, ಬೈಲಹೊಂಗಲ- ಜಗದೀಶ್ ವಿರೂಪಾಕ್ಷಿ ಚನ್ನಪ್ಪ,ಬೆಳಗಾವಿ (ಗ್ರಾಮಾಂತರ)-ಸಂಜಯ ಪಾಟೀಲ್, ಬೆಳಗಾವಿ (ದಕ್ಷಿಣ)- ಅಭಯ್ ಪಾಟೀಲ್, ಖಾನಾಪುರ-ಪ್ರಹ್ಲಾದ್ ರೇಮನಿ, ಕಾಗವಾಡ-ರಾಜು ಕಾಗೆ, ಕಿತ್ತೂರು- ಸುರೇಶ್ ಶಿವರುದ್ರಪ್ಪ ಮಾರಿಹಾಳ್, ಸವದತ್ತಿ-ಆನಂದ್ ವಿ.ಮಾಮನಿ.
ಬಳ್ಳಾರಿ ಜಿಲ್ಲೆ: ಹೂವಿನ ಹಡಗಲಿ(ಮೀಸಲು)-ಬಿ.ಚಂದ್ರಾ ನಾಯ್ಕ್, ಸಿರಗುಪ್ಪ- ಎಂ.ಕೆ.ಸೋಮಲಿಂಗಪ್ಪ, ಹಗರಿಬೊಮ್ಮನಹಳ್ಳಿ(ಮೀಸಲು)-ಕೆ.ನೇಮಿರಾಜ್ ನಾಯ್ಕ್ , ವಿಜಯನಗರ(ಹೊಸಪೇಟೆ)-ಆನಂದ್‌ಸಿಂಗ್. ಬೀದರ್ ಜಿಲ್ಲೆ: ಔರಾದ್ (ಮೀಸಲು)-ಪ್ರಭು ಚವ್ಹಾಣ್, ಬಿಜಾಪುರ ಜ್ಲಿೆ: ಬಿಜಾಪುರ ನಗರ-ಅಪ್ಪು ಪಟ್ಟಣಶೆಟ್ಟಿ, ಇಂಡಿ-ಡಾ.ಸಾರ್ವಭೌಮ ಬಗಲಿ, ಸಿಂಧಗಿ- ರಮೇಶ್ ಭೂಸನೂರ್, ಬಸವನಬಾಗೇವಾಡಿ-ಎಸ್.ಕೆ.ಬೆಳ್ಳುಬ್ಬಿ.
ದಕ್ಷಿಣ ಕನ್ನಡ ಜಿಲ್ಲೆ: ಮಂಗಳೂರು (ಉತ್ತರ)- ಕೃಷ್ಣ ಪಾಲೇಮಾರ್, ಮಂಗಳೂರು (ದಕ್ಷಿಣ)-ಎನ್.ಯೋಗೀಶ್ ಭಟ್, ಸುಳ್ಯ(ಮೀಸಲು)-ಎಸ್. ಅಂಗಾರ,
ಧಾರವಾಡ ಜಿಲ್ಲೆ: ಹುಬ್ಬಳ್ಳಿ-ಧಾರವಾಡ ಕೇಂದ್ರ-ಜಗದೀಶ್ ಶೆಟ್ಟರ್, ನವಲಗುಂದ-ಶಂಕರ ಪಾಟೀಲ್ ಮುನೇನಕೊಪ್ಪ, ಗದಗ ಜಿಲ್ಲೆ: ರೋಣ- ಕಳಕಪ್ಪ ಬಂಡಿ, ಶಿರಹಟ್ಟಿ(ಮೀಸಲು) -ರಾಮಣ್ಣ ಎಸ್.ಲಮಾಣಿ.
ಕೊಪ್ಪಳ ಜಿಲ್ಲೆ: ಕೊಪ್ಪಳ- ಕರಡಿ ಸಂಗಣ್ಣ, ಕೊಡಗು ಜಿಲ್ಲೆ:ಮಡಿಕೇರಿ-ಎಂ.ಪಿ. ಅಪ್ಪಚ್ಚುರಂಜನ್, ವಿರಾಜಪೇಟೆ-ಕೆ.ಜಿ.ಬೋಪಯ್ಯ, ಮೈಸೂರು ಜಿಲ್ಲೆ: ಕೃಷ್ಣರಾಜ- ಎಸ್.ಎ.ರಾಮದಾಸ್, ತುಮಕೂರು ಜಿಲ್ಲೆ: ತಿಪಟೂರು-ಬಿ.ಸಿ.ನಾಗೇಶ್, ತುಮಕೂರು ನಗರ-ಸೊಗಡು ಶಿವಣ್ಣ, ತುಮಕೂರು ಗ್ರಾಮಾಂತರ-ಬಿ.ಸುರೇಶ್ ಗೌಡ, ಚಾಮರಾಜನಗರ ಜ್ಲಿೆ: ಕೊಳ್ಳೆಗಾಲ(ಮೀಸಲು)-ಜಿ.ಎನ್. ನಂಜುಂಡಸ್ವಾಮಿ.
ಗುಲ್ಬರ್ಗ ಜಿಲ್ಲೆ: ಗುಲ್ಬರ್ಗ ಗ್ರಾಮಾಂತರ(ಎಸ್.ಸಿ)-ರೇವು ನಾಯಕ್ ಬೆಳಮಗಿ, ದಾವಣಗೆರೆ ಜಿಲ್ಲೆ: ಹರಪನಹಳ್ಳಿ-ಕರುಣಾಕರ ರೆಡ್ಡಿ, ರಾಯಚೂರು ಜ್ಲಿೆ: ದೇವದುರ್ಗ(ಮೀಸಲು)-ಶಿವನಗೌಡ ನಾಯ್ಕರನ್ನು ಕಣಕ್ಕಿಳಿಸಲು ಬಿಜೆಪಿ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
0 comments:
Post a Comment
Click to see the code!
To insert emoticon you must added at least one space before the code.