ಕೊಪ್ಪಳ:ಫೆ-೨೨:ಜಿಲ್ಲಾ ಕೊಪ್ಪಳ ಹೈದ್ರಾಬಾದ್ ಕರ್ನಾಟಕದ ಈ ನಮ್ಮ ಪ್ರದೇಶದಲ್ಲಿ ಆಡಳಿತ ಭಾಷೆ ಉರ್ದು ಆಗಿದ್ದರೂ ಸಹಿತ ಕನ್ನಡಕ್ಕೆ ಧಕ್ಕೆ ಬರುವಂತಹ ಕೆಲಸ ಯಾರಿಂದಲೂ ಆಗಿಲ್ಲ. ಭಾಷೆಯ ಜೊತೆಗೆ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಈ ನಾಡಿಗೆ ಸರ್ಕಾರ ಗೌರವಿಸವುದಾದರೆ ಮೊದಲು ಭಾಷಾ ಅಭಿವೃದ್ಧಿಗೆ ಶ್ರಮಿಸಲಿ ಎಂದು ಜಿಲ್ಲಾ ಈ.ಟಿ.ವಿ. ವರದಿಗಾರರಾದ ಶರಣಪ್ಪ ಬಾಚಲಾಪುರ ಆಗ್ರಹಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರದ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಜಾಗತಿಕ ಮಾತೃ ಭಾಷಾ ದಿನಾಚರಣೆಯಲ್ಲಿ ಭಾಗವಹಿಸಿ ಅತಿಥಿ ಉಪನ್ಯಾಸ ನೀಡುತ್ತಿದ್ದ ಅವರು ಕನ್ನಡದಿಂದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಆತಂಕದಲ್ಲಿರುವ ಕನ್ನಡಿಗರನ್ನು ಪಾರು ಮಾಡುಬೇಕಾದರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಶೇ ೮೦ ರಷ್ಟು ಮೀಸಲಾತಿ ಕನ್ನಡ ಮಾಧ್ಯಮದಲ್ಲಿ ಓದಿರುವವರಿಗೆ ಇರಬೇಕು ಎಂದು ಒತ್ತಾಯಿಸಿದರು.
ಇನ್ನೋರ್ವ ಅತಿಥಿ ಉಪನ್ಯಾಸಕ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಎ.ಪಿ. ಅಂಗಡಿಯವರು ಮಾತನಾಡಿ ಹೆತ್ತ ತಾಯಿ ಹಾಗೂ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂದು ಬಣ್ಣಿಸುತ್ತಾ ತಾವೇ ರಚಿಸಿದ ಕವನಗಳನ್ನು ವಾಚಿಸಿ ನಾಡಿನ ಸಂಸ್ಕೃತಿಯನ್ನು ಮನಮುಟ್ಟುವಂತೆ ಮಕ್ಕಳಿಗೆ ತಿಳಿಸಿಕೊಟ್ಟರು.
ಜಿಲ್ಲೆಯ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಜಾತಿ ವರ್ಗದ ಮೂಲಕ ಭಾಷೆ ಬಳಕೆ ಸಲ್ಲದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಣ್ಣ ನಿಂಗೋಜಿ ಸಾಹಿತಿ ಶಿ.ಕಾ. ಬಡಿಗೇರ ರವರು ಮಾತನಾಡಿದರು ಮುಖ್ಯೋಪಾಧ್ಯಾಯರಾದ ಶರಣಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಜ್ಯೋತಿ ಹಾಗೂ ಸಂಗಡಿಗರು ನಾಡಗೀತೆಗೈದರು, ಶಿಕ್ಷಕಿ ಸರಳಾ ಕೆಂಭಾವಿ ಸ್ವಾಗತಿಸಿದರು, ಶಿಕ್ಷಕಿ ಸಾವಿತ್ರಿ ಕುಲಕರ್ಣಿ ಹಾಗೂ ಶಿಕ್ಷಕಿ ಮಂಜುಳಾ ವಡಕಿ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.