

ದಿನಾಂಕ : ೨೦, ೨೧-೦೨-೨೦೧೩ ರಂದು ರಾಷ್ಟ್ರವ್ಯಾಪಿ ಮುಷ್ಖರಕ್ಕೆ ಬೆಂಬಲಿಸಿ ಕೊಪ್ಪಳದಲ್ಲಿ ಪ್ರತಿಭಟನೆ:
ಬೇಡಿಕೆಗಳು:
ಸುಮಾರು ವರ್ಷಗಳಿಂದ ಅತ್ಯಂತ ಕಡಿಮೆ ಕೂಲಿಗೆ ಕೆಲಸ ನಿರ್ವಹಿಸುವ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರನ್ನು ಅದರಲ್ಲೂ ಅಂಗನವಾಡಿ ಉದ್ಯೋಗಿಗಳನ್ನು, ಬಿಸಿಯೂಟ ತಯಾರಕರನ್ನು ಸರಕಾರವು ಖಾಯಂಗೋಳಿಸಬೇಕು.
ಬೆಲೆ ಏರಿಕೆ ನಿಯಂತ್ರಣಕ್ಕೆ ನಿರ್ದಿಷ್ಟ ಕ್ರಮವಹಿಸಬೇಕು. ಜನರನ್ನು ಎ.ಪಿ.ಎಲ್.ಮತ್ತು ಬಿ.ಪಿ,ಎಲ್. ಎಂದು ವಿಂಗಡಿಸುವುದನ್ನು ಕೈ ಬಿಟ್ಟು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಿ, ನಗದು ವರ್ಗಾವಣೆಯನ್ನು ಕೈಬಿಡಬೇಕು ಮತ್ತು ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ರದ್ದಿಗೋಳಿಸಬೇಕು.
ರಾಷ್ಟ್ರೀಯ ಸಾಮಾಜಿಕ ಸುರಕ್ಷತಾ ನಿಧಿ ಸ್ಥಾಪಿಸಿ ಅದಕ್ಕೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಒಳಗೂಳ್ಳಲು ಸಾರ್ವತ್ರಿಕ ಸಾಮಾಜಿಕ ಭದ್ರತೆ ರೂಪಿಸಬೇಕು.
ಬೋನಸ್, ಭವಿಷ್ಯ ನಿಧಿಗೆ ಅರ್ಹತೆ ಹಾಗೂ ಪಾವತಿ ಮೇಲಿನ ಎಲ್ಲಾ ಮಿತಿಗಳನ್ನು ತೆಗೆದುಹಾಕಿ ಉಪಧನ ಗಾತ್ರವನ್ನು ಹೆಚ್ಚಿಸಬೇಕು.
೪೫ ದಿನದೂಳಗಾಗಿ ಕಾರ್ಮಿಕ ಸಂಘವನ್ನು ಕಡ್ಡಾಯವಾಗಿ ನೊಂದಣಿ ಮಾಡಬೇಕು. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಂಘ ಕಟ್ಟುವ ಸ್ವತಂತ್ರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕಿನ ಒಡಂಬಡಿಕೆ ೮೭ ಹಾಗೂ ೯೮ ನ್ನು ಸಂಸತ್ತು ಅನುಮೊದಿಸಬೇಕು.
ಸರ್ವರಿಗೂ ಪಿಂಚಣಿ ಖಾತ್ರಿಗೊಳಿಸಬೇಕು.
ವೇತನಕ್ಕಾಗಿ ಪ್ರತ್ಯೇಕ ಅನುದಾನ ನೀಡಬೇಕು.
ಗಣಕಯಂತ್ರ ಸಹಾಯಕರ ಹೊರಗುತ್ತಿಗೆ ಪದ್ಧತಿ ಕೈ ಬಿಡಬೇಕು.
ಎಲ್ಲಾ ನೌಕರರಿಗೆ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ನೀಡಬೇಕು.
ಕೊಪ್ಪಳ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಹಶೀಲ್ದಾರರಿಗೆ ಮನವಿ ಪತ್ರ ಅರ್ಪಿಸಿ ಅಶೋಕ ವೃತ್ತದ ಮೂಲಕ ನಗರದ ಕೇಂದ್ರಿಯ ಬಸ್ ನಿಲ್ದಾಣದ ಮುಂದುಗಡೆ ಬೃಹತ್ ಮೆರವಣಿಗೆ ಬಂದು ವೃತ್ತಾಕಾರದ ರಸ್ತೆ ತಡೆ ಚಳುವಳಿ ನಡೆಸಲಾಯಿತು.
ನೇತೃತ್ವ: ಎ.ಐ.ಟಿ.ಯು.ಸಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಶೀಲವಂತರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಸ್. ಎ. ಗಫಾರ್, ಬಿಸಿಯೂಟ ತಯಾರಕರ ಒಕ್ಕೂಟದ ಅಧ್ಯಕ್ಷೆ ಪುಷ್ಪಾ ಮೇಸ್ರ್ತಿ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟದ ಶೈಲಜಾ ಸಸಿಮಠ, ಅಖಿಲ ಭಾರತ ಕಿಸಾನ ಸಭಾದ ಜಿಲ್ಲಾ ಸಂಚಾಲಕ ನನ್ನುಸಾಬ ನೀಲಿ, ಎ.ಐ.ಟಿ.ಯು.ಸಿ.ಯ ಶಿವಪ್ಪ ಹಡಪದ, ಮಖಬೂಲ್ ರಾಯಚೂರ, ಅಖಿಲ ಭಾರತ ಯುವಜನ ಒಕ್ಕೂಟದ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೋಲಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ಕವಲೂರ ಗ್ರಾಮ ಘಟಕದ ಕಾರ್ಯದರ್ಶಿ ಅಶೋಕ ಕಾಮೋಜಿ, ಸಂಘಟನಾ ಕಾರ್ಯದರ್ಶಿ ಶಮಶುದ್ದೀನ್ ಮಕಾನದಾರ್, ಅಶೋಕ ಎಲಿಗಾರ್ ರಾಜಸಾಬ ತಹಶೀಲ್ದಾರ್, ವಿಜಯಲಕ್ಷ್ಮಿ ಹಿರೇಮಠ, ತಳಕಲ್ ಗ್ರಾಮದ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಾಬುಸಾಬ್ ಬ್ಯಾಡಗಿ, ಹನುಮಂತಪ್ಪ ಕಾತರಕಿ, ಶಿವಮ್ಮ ಕಾಮನೂರ, ಮೈಲಪ್ಪ ಬಿಸರಳ್ಳಿ, ವಿಠ್ಠಪ್ಪ ಗೋರಂಟ್ಲಿ, ಮುಂತಾದವರು ಭಾಗವಹಿಸಿದರು.
0 comments:
Post a Comment
Click to see the code!
To insert emoticon you must added at least one space before the code.