೨೫ನೇ ವಾರ್ಡ್ ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯಾಗಿ
ಕೊಪ್ಪಳ, ಫೆ. ೨೨. ಸತತ ಮೂರು ದಶಕಗಳಿಂದ ನಮ್ಮ ಕುಟುಂಬ ಕಾಂಗ್ರೇಸ್‌ನಲ್ಲಿದ್ದುಕೊಂಡು ಸೇವೆ ಸಲ್ಲಿಸುತ್ತಾ ಬಂದರೂ ಸಹ ಕಾಂಗ್ರೇಸ್ ಜಿಲ್ಲಾಧ್ಯಕ್ಷರು ತಮ್ಮನ್ನು ಕಡೆಗಣಿಸಿರುವದರಿಂದ ಬಂಡಾಯ ಅಭ್ಯರ್ಥಿಯಾಗಿ ನಿಂತಿರುವದಾಗಿ ವಿಜಯಾ ಎಸ್. ಹಿರೇಮಠ ತಿಳಿಸಿದ್ದಾರೆ.
೨೫ ನೇ ವಾರ್ಡ್‌ಗೆ ಕಾಂಗ್ರೇಸ್‌ನ ಬಂಡಾಯ ಅಭ್ಯರ್ಥಿಯಾಗಿ ನಿಂತಿರುವದಕ್ಕೆ ಆ ವಾರ್ಡ್‌ನ ಜನರೂ ಸಹ ಸಂತಸ ವ್ಯಕ್ತಪಡಿಸುವದರ ಜೊತೆಗೆ, ಗೆಲ್ಲಿಸುವ ಭರವಸೆ ನೀಡಿದ್ದಾರೆ. ನಾವೂ ನಿರಂತರವಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದ್ದು, ಕೊಪ್ಪಳ ನಗರದಲ್ಲಿ ಆಗಬೇಕಿರುವ ಅಭಿವೃದ್ಧಿ ಬಗ್ಗೆ ಸ್ಪಷ್ಟವಾದ ಗುರಿ ಮತ್ತು ಉದ್ದೇಶ ಹೊಂದಿರುವ ನನಗೆ ಜನರು ಆಶೀರ್ವಾದ ಮಾಡುತ್ತಾರೆಂಬ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಿಸಾನ್ ಸೆಲ್ ಆಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಯ್ಯ ಹಿರೇಮಠ, ವಾರ್ಡಿನ ಪ್ರಮುಖರಾದ ಮಹ್ಮದ್ ಮಕ್ತದೀರ, ಮಹ್ಮದ್ ಬೇಗಂ, ಯಾಕೂಬ್ ಪಟೇಲ್, ವಿರುಪಾಕ್ಷಪ್ಪ ಹೂಗಾರ, ವೀರಣ್ಣ ಹೂಗಾರ, ಶಾಂತಮ್ಮ ಚಕ್ಕಡಿ ಇತರರು ಇದ್ದರು.
0 comments:
Post a Comment
Click to see the code!
To insert emoticon you must added at least one space before the code.