ಕೊಪ್ಪಳ : ಬೆಳಗಾವಿಯ ವಿಜಯ ಕರ್ನಾಟಕ ವರದಿಗಾರ ರಾಜು ಉಸ್ತಾದ ಹಾಗೂ ಚಿಕ್ಕೋಡಿಯ ವರದಿಗಾರ ಮೃತ್ಯುಂಜಯ ಯಲ್ಲಾಪುರಮಠ ಮೇಲೆ ಬುಧವಾರ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಕೊಪ್ಪಳ ಮೀಡಿಯಾ ಕ್ಲಬ್‌ನ ಪದಾಽಕಾರಿಗಳು ಹಾಗೂ ಸದಸ್ಯರು ಖಂಡಿಸಿದ್ದಾರೆ. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ನೀಡಿದ ಕ್ಲಬ್ ಸದಸ್ಯರು, ಈಚೆಗೆ ರಾಜ್ಯದಲ್ಲಿ ಪದೇ ಪದೇ ಪತ್ರಕರ್ತರ ಮೇಲೆ ದಾಳಿ, ಹಲ್ಲೆಯಂಥ ಘಟನೆಗಳು ಜರುಗುತ್ತಿರುವುದು ಮಾಧ್ಯಮದ ಬಲವನ್ನು ಕುಗ್ಗಿಸುವ ಕುಯುಕ್ತಿಗಳಾಗಿವೆ. ರಕ್ಷಣೆ ನೀಡಬೇಕಾದ ಆರಕ್ಷಕ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು. ಅಗತ್ಯ ಬಿದ್ದರೆ ಮಾಧ್ಯಮದವರ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಮೀಡಿಯಾ ಕ್ಲಬ್ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಭೀಮಸೇನ ಚಳಗೇರಿ, ಸೋಮರಡ್ಡಿ ಅಳವಂಡಿ, ದೇವು ನಾಗನೂರು, ಬಸವರಾಜ ಕರುಗಲ್, ಗಂಗಾಧರ ಬಂಡಿಹಾಳ, ಬಸವರಾಜ ಬಿನ್ನಾಳ, ಶರಣಪ್ಪ ಬಾಚಲಾಪೂರ, ಮುಕ್ಕಣ್ಣ ಕತ್ತಿ, ನಾಭಿರಾಜ ದಸ್ತೇನವರ, ಮೌನೇಶ ಬಡಿಗೇರ, ಹುಸೇನ್ ಪಾಷಾ, ಜಯಂತ್ ಸಿ.ಎಂ., ಗುರುರಜ ಬಿ.ಆರ್., ಶರಣಬಸಪ್ಪ, ಶಂಕರ ಕೊಪ್ಪದ, ಪ್ರಕಾಶ ಕಂದಕೂರ, ಮಲ್ಲಿಕಾರ್ಜುನಸ್ವಾಮಿ, ವಾಸೀಂ ಭಾವಿಮನಿ, ದೊಡ್ಡೇಶ ಯಲಿಗಾರ, ಈರಣ್ಣ ಬಡಿಗೇರ, ಶ್ರೀಪಾದ ಅಯಾಚಿತ್, ತಿಪ್ಪನಗೌಡ ಪಾಟೀಲ್ ಮತ್ತಿತರರು ಇದ್ದರು.
0 comments:
Post a Comment
Click to see the code!
To insert emoticon you must added at least one space before the code.