
ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಗಾಗಿ ನಡೆಯುತ್ತಿರುವ ಮಹಾದಾಸೋಹಕ್ಕಾಗಿ ಶ್ರೀಮಠದಕ್ಕೆ ರೊಟ್ಟಿ ಹಾಗೂ ದವಸಧಾನ್ಯಗಳು ಹರಿದು ಬರುತ್ತಲಿವೆ. ಮಹಾದಾಸೋಹಕ್ಕಾಗಿ ಇದೂವರೆಗೆ ಚಿಲ್ಕಮುಕ್ಕಿ ಗ್ರಾಮದ ಸದ್ಭಕ್ತರೋರ್ವರಿಂದ ರೊಟ್ಟಿ , ಹೀರೆಕಾಸನಕಂಡಿ ಗ್ರಾಮದ ಸದ್ಭಕ್ತರಿಂದ ದವಸಧಾನ್ಯಗಳು, ಹುಣಸಿಹಾಳ ಗ್ರಾಮದ ಸದ್ಭಕ್ತರಿಂದ ರೊಟ್ಟಿಗಳು, ಭಾನಾಪುರ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಹನುಮನಟ್ಟಿ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಸಿಹಿಬೂಂದಿ, ಗೋಸಲದೊಡ್ಡಿ ಗ್ರಾಮದ ಸದ್ಧಕ್ತರಿಂದ ದವಸ ಧಾನ್ಯಗಳು, ಹೊಸಳ್ಳಿ ಗ್ರಾಮದ ಸದ್ಧಕ್ತರಿಂದ ದವಸಧಾನ್ಯಗಳು, ಟಣಕಣಕಲ್ ಗ್ರಾಮದ ಸದ್ಭಕ್ತರಿಂದ ದವಸಧಾನ್ಯಗಳು ಹಾಗೂ ರೊಟ್ಟಿ , ದದೇಗಲ್,ಆಗೋಲಿ,ಚೆನ್ನಾಳ, ವಜ್ರಬಂಡಿ ಹಾಗೂ ಇಂದರಗಿ ಗ್ರಾಮದಿಂದ ರೊಟ್ಟಿ ಹಾಗೂ ದವಸ ಧಾನ್ಯಗಳು, ನರೇಗಲ್ ಗ್ರಾಮದ ಸದ್ಭಕ್ತರಿಂದ ದವಸ ಧಾನ್ಯಗಳು ಹಾಗೂ ರೊಟ್ಟಿ, ಶ್ರೀಮಠದ ಮಹಾದಾಸೋಹಕ್ಕೆ ಹರಿದು ಬಂದಿವೆ. ಇನ್ನೂ ಮೂರ್‍ನಾಲ್ಕು ದಿನಗಳಲ್ಲಿ ಸಾಗರೋಪಾಧಿಯಾಗಿ ರೊಟ್ಟಿ ಹಾಗೂ ದವಸ ಧಾನ್ಯಗಳು ಹರಿದು ಬರಲಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.