PLEASE LOGIN TO KANNADANET.COM FOR REGULAR NEWS-UPDATES



 : ಶಾಸಕ ಪರಣ್ಣ ಮುನವಳ್ಳಿ
ಕೊಪ್ಪಳ  : ಗ್ರಾಮೀಣ ಪ್ರದೇಶದಲ್ಲಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಜೀವಂತವಾಗಿರಿಸುವುದು ಅಗತ್ಯವಾಗಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಹೇಳಿದರು.
  ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾ.ಪಂ.ಕೊಪ್ಪಳ, ಗ್ರಾ.ಪಂ.ಬೂದಗುಂಪಾ, ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘ ಬೂದಗುಂಪಾ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಸ.ಪ್ರೌ.ಶಾಲೆಯ ಆವರಣದಲ್ಲಿ ಸೋಮವಾರ ಕೊಪ್ಪಳ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನೆ ನೆರವೇರಿಸಿ ಹಾಗೂ ಡೊಳ್ಳು ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
  ಗ್ರಾಮೀಣ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಯುವಜನ ಮೇಳದಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ.  ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಜಾನಪದ ಸಾಹಿತ್ಯವು ಯಾವುದೇ ವ್ಯಕ್ತಿಯೊಬ್ಬರಿಂದ ಬೆಳೆದು ಬಂದಿಲ್ಲ, ಅದು ನಮ್ಮ ಪೂರ್ವಜರ ಶ್ರಮದ ಫಲವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಸಮಾಜದಿಂದ ಸಮಾಜಕ್ಕೆ ಬೆಳೆದು ನಿಂತ ಹೆಮ್ಮರವಾಗಿದೆ.  ಇಂತಹ ಯುವಜನ ಮೇಳಗಳಲ್ಲಿ ಯುವ ಜನತೆ ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಅವರು ಕರೆನೀಡಿದರು. 
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸದಸ್ಯ ಟಿ.ಜನಾರ್ಧನ ಹುಲಗಿ ಅವರು ಮಾತನಾಡಿ, ಸ್ವಚ್ಛ ಸಮಾಜವನ್ನು ಕಟ್ಟುವಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.  ಯುವಕರು ದುಶ್ಚಟಗಳಿಗೆ ಬಲಿಯಾಗದೆ ಇಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ, ಉತ್ತಮ ನಾಗರಿಕ ಬದುಕನ್ನು ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.  
  ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ದೇವಣ್ಣ ಭರಮಪ್ಪ ಮೇಕಾಳಿ, ತಾ.ಪಂ.ಸದಸ್ಯೆ ಭೀಮವ್ವ ಈರಪ್ಪ ಪಮ್ಮಾರ, ಗ್ರಾ.ಪಂ.ಅಧ್ಯಕ್ಷೆ ಪಾರಮ್ಮ ಸಿದ್ದಪ್ಪ ಗೊಬ್ಬಿ, ಗ್ರಾ.ಪಂ.ಉಪಾಧ್ಯಕ್ಷ ದೇವಪ್ಪ ಜೀನಿನ್, ಸದಸ್ಯರಾದ ಎ.ವಿ.ಗುರುರಾಜ, ಹನುಮಂತಪ್ಪ ಹೊಳೆಯಾಚೆ, ಪ್ರಾಚಾರ್ಯ ಸಿ.ವಿ.ಜಡಿಯವರ, ಮರಿಯಮ್ಮ ಚೆನ್ನದಾಸರ, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಕೆಂಪ ಹನುಮಪ್ಪ ಪೆದ್ಲ, ಗ್ರಾಮದ ವೆಂಕಟೇಶ ಈಳಿಗೇರ, ಅಯ್ಯನಗೌಡ್ರು, ಶ್ರೀನಿವಾಸ ಕಂಠಿ, ಪರಶುರಾಮ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವಿ.ಎನ್,ಘಾಡಿ, ನಿವೃತ್ತ ಅಧೀಕ್ಷಕ ಉಸ್ಮಾನ ಸಾಬ, ಸಹಾಯಕ ಕ್ರೀಢಾಧಿಕಾರಿಗಳಾದ  ತಿಪ್ಪೇಸ್ವಾಮಿ, ಬಸವರಾಜ, ಖೋ ಖೋ ತರಬೇತಿದಾರ ಎ.ಎನ್.ಯತಿರಾಜು, ಕ್ರೀಡಾ ಇಲಾಖೆಯ ಸಿಬ್ಬಂದಿ ಕೆ.ಎಂ.ಪಾಟೀಲ್, ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ರಾಕೇಶ ಕಾಂಬ್ಲೇಕರ್ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಷ್ಠ ಲಕ್ಷ್ಮೀ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಕೊಪ್ಪಳ ಸಹಾಯಕ ಕ್ರೀಡಾಧಿಕಾರಿ ಎನ್.ಎಸ್.ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು, ಮಧುಸೂದನ ಡೊಳ್ಳಿನ ನಿರೂಪಿಸಿದರು. ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘದ ಉಪಾಧ್ಯಕ್ಷ ನಿಂಗಪ್ಪ ಕೊನೆಯಲ್ಲಿ ವಂದಿಸಿದರು. 

31 Dec 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top