ಕೊಪ್ಪಳ :- ವಷನಗಳು ಸಾಮಾಜಿಕ ಪ್ರಜ್ಞೆ ಬೆಳವಣಿಗೆಗೆ ಸಹಕಾರಿಯಾಗಿವೆ. ಎಂದು ನಗರದ ಶ್ರೀ ಬಸವೇಶ್ವರ ಟ್ರಸ್ಟ್‌ನ ಮಾಸಿಕ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶರಣೆ ಶ್ರೀಮತಿ ಕಿರ್ತಿ ವಿನೋದಾ ಬಂಗಾರ ಶೆಟ್ಟರ ಅಭಿಪ್ರಾಯ ಪಟ್ಟರು.
೧೨ ನೇ ಶತಮಾನದಲ್ಲಿ ವ್ಯಕ್ತಿಯನ್ನು ಜಾತಿಯಿಂದ ಪ್ರಿತಿಸಿದೆ. ಕಾಯಕದಿಂದ ಪ್ರೀತಿಸಬೇಕು. ಮತ್ತು ಜಾತಿಗಳು ಮಾನವ ನಿರ್ಮಿತವಾದವು ವಿನಾಹ ದೇವ ನಿರ್ಮಿತವಲ್ಲ ಎಂದು ಬಸವಾದಿ ಶರಣರು ಜಾತಿ, ವರ್ಣ, ವರ್ಗ ರಹಿತ ಸಮಾಜ ನಿರ್ಮಿಸಿದವರು ಅಂತಹ ಸಮಾಜ ನಿರ್ಮಿಸಲು ವಚನಗಳು ಪ್ರಭಾವ ಕಾರಣವಾಗಿತ್ತು. ಆದ್ದರಿಂದ ತಮ್ಮ ಪಿಳಿಗೆಗೆ ವಚನಗಳು ಕಲಿಸುವ ಅಗತ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ನಗರಸಭೆ ಅಧ್ಯಕ್ಷ ಶ್ರೀಮತಿ ಲಲೀತಾ ಅಂದಾನಪ್ಪ ಅಗಡಿ ಬಸವಣ್ಣನವರು ಮಹಿಳೆಯರಿಗೆ ಸ್ವತಂತ್ರ್ಯ ಸಮಾನತೆ ನೀಡಿದ ಶ್ರೇಷ್ಠ ಪ್ರವಾದಿ ಎಂದರು. ಶರಣಮ್ಮ ಕಲ್ಮಂಗಿ ನಿರೂಪಿಸಿದರು. ಮಂಜುಳಾ ಮುದಗಲ್ ಸ್ವಗತಿಸಿದರು. ರಾಜೆಶ ಸಸಿಮಠ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.