ಕೊಪ್ಪಳ,ಡಿ.೩೧: ಸಾಮೂಹಿಕ ವಿವಾಹಗಳಲ್ಲಿ ವಿವಾಹ ಮಾಡಿಕೊಳ್ಳುವುದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಇದು ಬಡವರ ಪಾಲಿಗೆ ವರಧಾನವಾಗಿ ಪರಿಣಮಿಸಿದೆ ಎಂದು ಸೈಯದ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ. ಸೈಯದ್ ಹೇಳಿದರು.
ಅವರು ತಾಲೂಕಿನ ಹಾಲವರ್ತಿ ಗ್ರಾಮದ ಶ್ರೀ ಆಂಜಿನೇಯ ದೇವಸ್ಥಾನದ ಕಾರ್ತಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಮಾತನಾಡಿ ಅವರು, ಆರ್ಥಿಕ ಸುಧಾರಣೆಗೆ ಸಾಮೂಹಿಕ ವಿವಾಹಗಳ ಬಹಳಷ್ಟು ಸಹಕಾರಿಯಾಗಿದ್ದು ಅದರ ಸದುಪಯೋಗವನ್ನು ಗ್ರಾಮೀಣದ ಜನತೆ ಹೆಚ್ಚು ಪಡೆಯಬೇಕಿದೆ ಇಂತಹ ಕಾರ್ಯಗಳಿಗೆ ತಮ್ಮ ಸಂಸ್ಥೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸೈಯದ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ. ಸೈಯದ್ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಪ್ರದೀಪಗೌಡ ಮಾಲಿ ಪಾಟೀಲ್, ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಬಿಜೆಪಿ ಯುವ ಮುಖಂಡ ಅಮರೇಶ ಕರಡಿ, ಬಿಎಸ್‌ಆರ್ ಪಕ್ಷ ಮುಖಂಡರಾದ ಪ್ರಭುಗೌಡ ಪಾಟೀಲ್ , ವೆಂಕಟೇಶ ಹಾಲವರ್ತಿ , ಗೌಸ್‌ಸಾಬ ನಿರ್ಲಗಿ ಹಾಗೂ ಗ್ರಾಮದ ಹಿರಿಯರಾದ ಬಸವರಾಜಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು
0 comments:
Post a Comment
Click to see the code!
To insert emoticon you must added at least one space before the code.