ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಸುವಣ೯ ಗ್ರಾಮ ಯೋಜನೆಯಡಿ ಐದನೇ ಹಂತದ ರು, ೫೨.೭೨ ಲಕ್ಷ ಅನುದಾನದ ಕಾಮಗಾರಿಗೆ ಶುಂಕು ಸ್ಥಾಪನೆ ನೆರವೇರಿಸದ ಬಳಿಕ ಅವರು ಮಾತನಾಡಿದರು.
ಗ್ರಾಮೀಣ ಜನರಿಗೆ ಬಸವ, ಆಶ್ರಯ ಸೇರಿದಂತೆ ಇತರ ಯೋಜನೆಗಳು ಸಮಪ೯ಕವಾಗಿ ಬಳಕೆ ಮಾಡಿಕೊಂಡಾಗ ಮಾತ್ರ ಸಕಾ೯ರದ ಯೋಜನೆಗಳು ಸಫಲತೆ ಕಾಣಲು ಸಾಧ್ಯ. ಆಗ ಮಾತ್ರ ಗ್ರಾಮಗಳು ಅಭಿವ?ದ್ದಿ ಹೊಂದಲ ಸಾಧ್ಯವಾಗುತ್ತದೆ ಎಂದರು.
ಸುವ೯ಣ ಗ್ರಾಮದ ಕನಸು ನಸಸು ಃ ರಾಜ್ಯ ಸಕಾ೯ರ ಸುವಣ೯ ಗ್ರಾಮ ಆಯ್ಕೆ ಮಾಡಿಕೊಂಡು ಮಹತ್ತರ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಸಫಲತೆ ಕಾಣುತ್ತಿದ್ದೇವೆ. ಹಾಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ಯದ ಕನಸು ಈ ಸುವಣ೯ ಗ್ರಾಮ ಯೋಜನೆಯಿಂದ ಬಹುತೇಕ ನನಸು ಕಾಣುವ ಹಂತ ತಲುಪುತ್ತಿದೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದರು.
ಜೆಸ್ಕಾಂಗೆ ಸೂಚನೆ ಃ ಗ್ರಾಮದಲ್ಲಿ ವಿದ್ಯುತ್? ಕಂಬಗಳು ಬಹುತೇಕ ಶೀಥಲತೆ ಹಾಗೂ ವಿದ್ಯುತ್? ವೈಯರ್?ಗಳ ಬದಲಾವಣೆಗೆ ತಾವು ಮನವಿ ಮಾಡಿದ್ದು, ನಿರಂತರ ಜ್ಯೋತಿ ಯೋಜನೆ ಸ್ವಲ್ಪ ದಿನದಲ್ಲಿಯೇ ಬರಲಿದೆ. ಅಲ್ಲದೇ, ಶಿಥಿಲಗೊಂಡ ವಿದ್ಯುತ್? ಕಂಬ ಹಾಗೂ ವೈಯರ್?ಗಳ ಬದಲಾವಣೆ ಕುರಿತಂತೆ ಕೆಪಿಟಿಸಿಎಲ್? ಇಲಾಖೆಗೆ ಸೂಚನೆ ನೀಡಿ ಬದಲಾವಣೆ ಮಾಡಲು ಸೂಚನೆ ನೀಡಲಾಗುವುದು ಎಂದು ಹೇಳಿದರು.
ಶುದ್ದ ಕುಡಿಯುವ ನೀರು ಘಟಕ ಪ್ರಾರಂಭ ಃ ಗ್ರಾಮದಲ್ಲಿ ಪ್ಲೋರೈಡ್ ನೀರು ಕುಡಿಯುವ ಬದಲಾಗಿ ಸುಮಾರು ರು, ೫ ಲಕ್ಷ ವೆಚ್ಚದಲ್ಲಿ ಶುದ್ದ ಕುಡಿಯುವ ನೀರು ಘಟಕ ಸ್ಥಾಪನೆ ಮಾಡಲು ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಸ್ಥಳವಕಾಶ ನೀಡಿದರೆ ಶುದ್ದ ಕುಡಿಯುವ ನೀರು ಘಟಕ ಸ್ಥಾಪನೆ ಮಾಡಲು ಮುಂದಾಗುವುದು ಈ ಕುರಿತಂತೆ ಗ್ರಾಪಂ ಸದಸ್ಯರು ಚಚೆ೯ ನಡೆಸಿ ವಿಷಯ ತಿಳಿಸಲಿ ಎಂದರು.
ಜಿಪಂ ಸದಸ್ಯೆ ಸೀತಾ ಗೂಳಪ್ಪ ಹಲಗೇರಿ ಮಾತನಾಡಿ, ಮುದ್ದಾಬಳ್ಳಿ ಗ್ರಾಮಕ್ಕೆ ಈಗಾಗಲೇ ೨ ಅಂಗನವಾಡಿ ಕೇಂದ್ರಗಳು ಬಂದಿದ್ದು, ಅವುಗಳಿಗೆ ಸೂಕ್ತ ಸ್ಥಳವಕಾಶ ಇಲ್ಲದಂತಾಗಿ ಹಾಗೇ ನೆನೆಗುದಿಗೆ ಬಿದ್ದಿವೆ. ಸ್ಥಳೀಯವಾಗಿ ಜಾಗ ನೀಡಿದರೆ ಬಾಲ ಮಕ್ಕಳಿಗೆ ಕೇಂದ್ರಗಳ ದೊರೆಯುತ್ತವೆ. ಎಂದರು.
ರಸ್ತೆ , ಚರಂಡಿ ಹಾಗೂ ಕಸ ವಿಲೇವಾರಿಗೆ ಅನುದಾನ ಬಂದಿದ್ದು, ಎಲ್ಲರು ಒಗ್ಗಟ್ಟಾಗಿ ಕಾಮಗಾರಿ ಪೂಣ೯ಗೊಳಿಸೋಣ ಎಂದರು.ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗೋವಿಂದರಡ್ಡಿ ಮಾದಿನೂರು ಅವರು ಪ್ರಾಸ್ತಾವಿಕ ಮಾತನಾಡಿದರು ಬಳಿಕ ಶಾಸಕ ಸಂಗಣ್ಣ ಕರಡಿ ಅವರು ಅಹ೯ ಫಲಾನುಭವಿಗಳಿಗೆ ನೂತನ ಪಡಿತರ ಕಾಡ್?೯ ವಿತರಣೆ ಮಾಡಿದರು. ಕಾಯ೯ಕ್ರಮದ ಅಧ್ಯಕ್ಷೆತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಸಿದ್ದಮ್ಮ ಪೂಜಾರ್?ವಹಿಸಿದ್ದರು. ಕಾಯ೯ಕ್ರಮದಲ್ಲಿ ಗ್ರಾಪಂ ಸದಸ್ಯರಾದ ಸಣ್ಣ ಹನುಮಪ್ಪ ಹುಳ್ಳಿ, ಪ್ರಕಾಶ ಹಾಲವತಿ೯, ಸಿದ್ದು ಕಲಾಲ್?, ಹಾಗೂ ಶರಣಪ್ಪ , ಗ್ರಾಪಂ ಕಾಯ೯ದಶಿ೯ ವೆಂಕಟೇಶ, ಗ್ರಾಮದ ಹಿರಿಯರಾದ ಶರಣಗೌಡ ಪಾಟೀಲ್?, ನಂದಯ್ಯ ಸಸಿ, ಪಂಪಣ್ಣ ಹಳ್ಳಿಗುಡಿ, ಈಶಪ್ಪ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ದೊಡ್ಡನಗೌಡ ಪಾಟೀಲ್ ಕಾಯ೯ಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.