PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ; ಅ.೨೬.   ಮಹರ್ಷಿ ವಾಲ್ಮೀಕಿ ಜಯಂತೋಂತ್ಸವ ಅಂಗವಾಗಿ ದಿ.೨೯.೧೦.೨೦೧೨ ರಂದು ನಡೆಯುವ ಕಾರ್ಯಕ್ರಮದ ಫ್ಲೆಕ್ಸ್ (ಬ್ಯಾನರ್)ಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ, ರಸ್ತೆಗಳಲ್ಲಿ ಕಾಟಾಚಾರಕ್ಕೆಂಬಂತೆ ಕಟ್ಟಿರುವುದು ಅವಮಾನಕ್ಕೆ ಕಾರಣವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಸಂಘಟನೆಗಳು ಖಂಡಿಸಿವೆ.

ನಗರದ ಅನೇಕ ಕಡೆ ಸಂಘ, ಸಂಸ್ಥೆಗಳು, ವ್ಯಕ್ತಿಗಳು   ಮಹರ್ಷಿ ವಾಲ್ಮೀಕಿ ಜಯಂತಿಯ ಫ್ಲೆಕ್ಸ್ (ಬ್ಯಾನರ್)ಗಳನ್ನು ಹಾಕಿದ್ದು ಅದರ ಬುಡಕ್ಕೆ ಕಟ್ಟಿರುವುದು, ನೆಲಕ್ಕೆ ತಾಗುವಂತೆ ಕಟ್ಟಿರುವುದು, ಮಲೀನಗೊಂಡ (ಕೊಳಚೆ) ಜಾಗೆಗಳಲ್ಲಿ,ಅಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಂದು ಸಾಹಿತ್ಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದ ಫ್ಲೆಕ್ಸ್(ಬ್ಯಾನರ)ಗಳನ್ನು ಕಟ್ಟಲಾಗಿದೆ ಅದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಖಾಸಗಿ ವ್ಯಕ್ತಿಗಳು, ಸಂಘ, ಸಂಸ್ಥೆಗಳು ಬಿದಿರಿನ ಕಟೌಟಗಳನ್ನು ತಯಾರಿಸಿ ಸುಂದರವಾಗಿ ಕಾಣುವಂತೆ ಕಟ್ಟಿಸಿದ್ದು, ಸರ್ಕಾರದಿಂದ ನಡೆಯುವ ಶ್ರೀ   ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸ್ವಾಗತಿಸುವ ಸರ್ಕಾರದ ಫ್ಲೆಕ್ಸ್ (ಬ್ಯಾನರ್)ಗಳು ಜನರಿಗೆ ಸ್ಪಷ್ಟವಾಗಿ, ಸುಂದರವಾಗಿ ಕಾಣುವಂತೆ ಕಟ್ಟಬೇಕು ಆದರೆ ನಗರದ ತುಂಬ ಕಾಟಾಚಾರಕ್ಕೆಂಬಂತೆ, ಬೇಕಾಬಿಟ್ಟಿ ಕಟ್ಟಿ ಕೈ ತೊಳೆದುಕೊಂಡಿದ್ದಾರೆ, ಸರ್ಕಾರ ತಕ್ಷಣ ತಪ್ಪಿಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಂಡು ಮಾನವತಾವಾದಿ   ಮಹರ್ಷಿ ವಾಲ್ಮೀಕಿ, ಡಾ.ಬಿ.ಆರ್. ಅಂಬೇಡ್ಕರ, ಬಾಬು ಜಗಜೀವನರಾಮ, ಮುಂತಾದವರು ಯಾವುದೇ ಧರ್ಮಕ್ಕೆ, ಜಾತಿಗೆ ಸಿಮೀತವಾಗಿಲ್ಲ, ಸರ್ವ ಜನಾಂಗದವರು ಭಾಗವಹಿಸುವಂತೆ ಜಿಲ್ಲಾಡಳಿತ ಕಾರ್ಯಕ್ರಮ ರೂಪಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎ.ಗಫಾರ್, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ.ಪಿ.ಚಿಕ್ಕೇನಕೊಪ್ಪ, ಉಪಾಧ್ಯಕ್ಷ ನಿಂಗಪ್ಪ ಟಣಕನಕಲ್ಲ, ಅಖಿಲ ಭಾರತ ಕಿಸಾನ ಸಭಾ ಜಿಲ್ಲಾ ಸಂಚಾಲಕ ನನ್ನುಸಾಬ ನೀಲಿ, ಶಿವಪ್ಪ ಹಡಪದ. ಮಖಬೂಲ್ ರಾಯಚೂರ, ಗಾಳೆಪ್ಪ ಮುಂಗೋಲಿ ಮುಂತಾದವರು ಒತ್ತಾಯಿಸಿದ್ದಾರೆ. 

27 Oct 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top