ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ೨೦೧೨ ರ ನವೆಂಬರ್ ೦೧ ರಿಂದ ೩೦ ರವರೆಗೆ ತಿಂಗಳ ಪೂರ್ತಿ ಪರಿಷತ್ತಿನ ಪ್ರಕಟಣೆಗಳನ್ನು ಶೇ.೧೫ ರಿಂದ ಶೇ.೭೫ ರವರೆಗೆ ರಿಯಾಯತಿ ದರದಲ್ಲಿ ಮಾರಾಟ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೆಂಗಳೂರಿನ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೫.೩೦ ರವರೆಗೆ (ದೀಪಾವಳಿ ಹಬ್ಬದ ಪ್ರಯುಕ್ತ ದಿ.೧೨ ಮತ್ತು ದಿ.೧೪ ಹೊರತುಪಡಿಸಿ) ನಿರಂತರವಾಗಿ ಭಾನುವಾರ ರಜಾ ದಿನಗಳು ಸೇರಿದಂತೆ ಪುಸ್ತಕ ಮಾರಾಟವಿರುತ್ತದೆ. ಶಾಲಾ, ಕಾಲೇಜು ಗ್ರಂಥಾಲಯಗಳ ಪುಸ್ತಕ ಖರೀದಿಗೆ ಇದು ಸಕಾಲವಾಗಿದ್ದು, ಸಂಬಂಧಪಟ್ಟವರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.
ಈ ವಿಶೇಷ ರಿಯಾಯತಿಯ ಪ್ರಯೋಜನವನ್ನು ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು, ಪುಸ್ತಕ ಮಾರಾಟಗಾರರು, ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ. ಅಂಚೆ ಮೂಲಕ ಪುಸ್ತಕ ಪಡೆಯಲು ಇಚ್ಚಿಸುವವರು ಅಂಚೆ ವೆಚ್ಚ ಪ್ರತ್ಯೇಕವಾಗಿ ಪಾವತಿಸಬೇಕಾಗಿರುತ್ತದೆ.
ರತ್ನಕೋಶ, ನಿಘಂಟು, ಸಿ.ಡಿ. ಕ್ಯಾಸೆಟ್‌ಗಳಿಗೆ ೧೫% ರಿಯಾಯತಿ, ಪಠ್ಯ ಪುಸ್ತಕಗಳಿಗೆ ೨೫%, ಪ್ರಾರಂಭದಿಂದ ೨೦೧೧ನೇ ಇಸವಿಯವರೆಗೆ ಪ್ರಕಟವಾದ ಪುಸ್ತಕಗಳು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಲಿಕೆಗಳಿಗೆ ೫೦% ಹಾಗೂ ಸ್ಮರಣ ಸಂಚಿಕೆಗಳಿಗೆ ೭೫% ವಿಶೇಷ ರಿಯಾಯತಿ ಏರ್ಪಡಿಸಲಾಗಿದೆ. ಮರುಮುದ್ರಣವಾಗಿರುವ ಕನ್ನಡ-ಕನ್ನಡ ಬೃಹತ್ ನಿಘಂಟಿನ ೫ ಪುಟಗಳು ರೂ.೨,೮೦೦/- ರ ಮುಖ ಬೆಲೆಗೆ ದೊರೆಯುತ್ತದೆ. ಹೆಚ್ಚಿನ ವಿವರಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-೫೬೦೦೧೮ ದೂ.ಸಂಖ್ಯೆ : ೦೮೦-೨೬೬೨೩೫೮೪ ಮೂಲಕ ಪಡೆಯಬಹುದಾಗಿದೆ
0 comments:
Post a Comment
Click to see the code!
To insert emoticon you must added at least one space before the code.