PLEASE LOGIN TO KANNADANET.COM FOR REGULAR NEWS-UPDATES

ಗವಿಸಿದ್ದೇಶ್ವರ ಸ್ವಾಮಿಗಳಿಂದ ಕೊಪ್ಪಳ ಜಿಲ್ಲಾ ಡೈರೆಕ್ಟರಿ ಲೋಕಾರ್ಪಣೆ
ಕೊಪ್ಪಳ : ನಮ್ಮ ಜಿಲ್ಲೆಯ ಸಮಗ್ರ ಸಾಮಾಜಿಕ,ಆರ್ಥಿಕ,ರಾಜಕೀಯ,ಧಾರ್ಮಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನೊಳಗೊಂಡ ಪುಸ್ತಕದ ಅವಶ್ಯಕತೆಯಿತ್ತು. ಆ ನಿಟ್ಟಿನಲ್ಲಿ ಕನ್ನಡನೆಟ್ ಡಾಟ್ ಕಾಂ ಬಳಗದ "ಕೊಪ್ಪಳ ಜಿಲ್ಲಾ ಡೈರೆಕ್ಟರಿ" ಅತ್ಯುತ್ತಮವಾಗಿ ಹೊರಬಂದಿದೆ. ಇದು ಜಿಲ್ಲೆಗೆ ಅತ್ಯಗತ್ಯವಾದ ಮಾಹಿತಿ ಕೋಶವಾಗಿದೆ. ಅತ್ಯಂತ ಶ್ರಮವಹಿಸಿ, ಆಸಕ್ತಿಯಿಂದ  ಕನ್ನಡನೆಟ್ ಡಾಟ್ ಕಾಂ ಬಳಗ ಮಾಡಿರುವ ಪ್ರಯತ್ನ ಯಶಸ್ವಿಯಾಗಿದೆ. ಇದೊಂದು ಅತ್ಯಮೂಲ್ಯ,ಸಂಗ್ರಹಯೋಗ್ಯ ಮಾಹಿತಿಕೋಶ ನಿಮಗೆ ಅಭಿನಂದನೆಗಳು ಎಂದು ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಕನ್ನಡನೆಟ್ ಡಾಟ್ ಕಾಂ ಹೊರತಂದಿರುವ ಕೊಪ್ಪಳ ಜಿಲ್ಲೆಯ ಸಾಮಾಜಿಕ,ಆರ್ಥಿಕ,ರಾಜಕೀಯ ಹಾಗೂ ಶೈಕ್ಷಣಿಕ ಮಾಹಿತಿಯನ್ನೊಳಗೊಂಡ "ಕೊಪ್ಪಳ ಜಿಲ್ಲಾ ಡೈರೆಕ್ಟರಿ" ಯನ್ನು ಗವಿಮಠದಲ್ಲಿ ಇಂದು ಲೋಕಾರ್ಪಣೆ ಮಾಡಿದರು.
ಕನ್ನಡನೆಟ್ ಡಾಟ್ ಕಾಂ ಬಳಗವು ನಿರಂತರವಾಗಿ ನಡೆಸುತ್ತಿರುವ ಸಾಹಿತ್ಯಿಕ,ಸಾಂಸ್ಕೃತಿಕ ಚಟುವಟಿಕೆಗಳು ಗಮನಸೆಳೆಯುತ್ತಿವೆ ನಿಮಗೆ ಶುಭವಾಗಲಿ ಎಂದು ಹಾರೈಸಿದರು.  ಕನ್ನಡನೆಟ್ ಡಾಟ್ ಕಾಂ ಸಂಪಾದಕ ಸಿರಾಜ್ ಬಿಸರಳ್ಳಿ "ಕೊಪ್ಪಳ ಜಿಲ್ಲಾ ಡೈರೆಕ್ಟರಿ" ಒಳಗೊಂಡಿರುವ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಪುಸ್ತಕ , ಡಿವಿಡಿ ರೂಪದಲ್ಲಿ ಹೊರತರಲಾಗಿರುವ "ಕೊಪ್ಪಳ ಜಿಲ್ಲಾ ಡೈರೆಕ್ಟರಿ" ಯ ಎಲ್ಲ ಮಾಹಿತಿಯು ವೆಬ್‌ಸೈಟ್ ಹಾಗೂ ಬ್ಲಾಗ್(kannadanet.com, kannadanet.blogspot.com) ನಲ್ಲಿ ಸಹ ಲಭ್ಯವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜಾಬಕ್ಷಿ ಎಚ್.ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲಾ ಡೈರೆಕ್ಟರಿಯಲ್ಲಿ ಕೊಪ್ಪಳ ಜಿಲ್ಲೆಯ ಬ್ಯಾಂಕ್,ಸ್ಕೂಲ್ ಕಾಲೇಜ್,ಪತ್ರಕರ್ತರ,ಸಾಹಿತಿಗಳ,ವಕೀಲರ,ವೈದ್ಯರ, ಫೋಟೋ ಗ್ರಾಫರ್‍ಸ್, ಗುತ್ತಿಗೆದಾರರ, ರಾಜಕಾರಣಿಗಳ,ಸಂಘಟನೆಗಳ,ರಿಯಲ್ ಎಸ್ಟೇಟ್, ಅಂಗಡಿಗಳು,ಹೋಟೆಲ್,ಬಾರ್ ,ರೆಸ್ಟೋರೆಂಟ್,ಲಾಡ್ಜ್,ಸರಕಾರಿ ಅಧಿಕಾರಿಗಳ,ಎಮರ್ಜನ್ಸಿ ನಂಬರ್ ಗಳು ಸೇರಿದಂತೆ ಇನ್ನೂ ಹತ್ತಾರು ವಿಷಯಗಳ ಮಾಹಿತಿ,ಫೋನ್ ನಂಬರ್ ನೀಡಲಾಗಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ೯೮೮೦೨೫೭೪೮೮.

18 Oct 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top