ಕೊಪ್ಪಳ ೨೪ : ಪ್ರತಿಯೊಬ್ಬ ಮನುಷ್ಯ ತಾನೂಗಳಿಸಿದ ಸಂಪಾದನೆಯಲ್ಲಿ ಇಂತಿಷ್ಟು ಪಾಲು ಬಡವರಿಗೆ ಸಹಾಯ ಮಾಡುವುದೇ ಮಾನವ ಧರ್ಮದ ತಿರುಳು ಅದರಂತೆ ಸಹಾಯ ಮಾಡಲು ಮೊದಲು ಮನಸ್ಸು ಮಾಡಬೇಕು ಅಂದಾಗ ಆ ಮನುಷ್ಯನ ಕೈ ಸಹಾಯಕ್ಕೆ ಮುಂದಾಗುತ್ತದೆ ಅದರಂತೆ ಇಲ್ಲಿನ ಸಮಾಜಸೇವಕ ಕೆ.ಎಂ.ಸಯ್ಯದ್‌ರವರು ಬಡವರಿಗೆ ಸಹಾಯಮಾಡುವ ಕೈ ಮತ್ತು ಮನಸ್ಸು ಹೊಂದಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ಕೆ.ಎಂ.ಸಯ್ಯದ್‌ರವರ ನಿವಾಸದಲ್ಲಿ ಸಯ್ಯದ್ ಫೌಂಡೇಶನ್ ವತಿಯಿಂದ ವಿಕಲಚೇತನರಿಗೆ ಉಚಿತ ಸೈಕಲ್ ವಿತರಣಾ ಸಮಾರಂಭದ ಉದ್ಘಾಟನೆಯನ್ನು ನೆರೆವೆರಿಸಿ ಮಾತನಾಡುತ್ತ ಕೆ.ಎಂ.ಸಯ್ಯದ್‌ರಂತಹ ಸಮಾಜಕ ಸೇವಕರು ಇನ್ನು ಇರುವುದರಿಂದಲೆ ಈ ಪ್ರಪಂಚ ನಡೆಯುತ್ತಿದೆ ಎಂದರು.ಮುಂದುವರೆದ ಮಾತನಾಡಿದ ಅವರು ದಾನಕ್ಕೆ ಇಸ್ಲಾಂ ಧರ್ಮದಲ್ಲಿ ಬಹಳ ಮಹತ್ವವಿದೆ ಸಹಾಯ ಮಾಡುವ ಪ್ರವರ್ತಿ ಮನುಷ್ಯ ಬೆಳಿಸಿಕೊಳ್ಳಬೇಕು ಅಂದಾಗ ಮಾತ್ರ ಜೀವನ ಸಾರ್ಥಕ ವಾಗುತ್ತದೆ ಇಂತಹ ಒಳ್ಳೆಯ ಕೆಲಸಮಾಡುವ ಕೆ.ಎಂ.ಸಯ್ಯದ್ ಒಟ್ಟಾರೆ ನಮ್ಮ ಕೊಪ್ಪಳದ ಬಡವರಪಾಲಿಗೆ ಸಂಜೀವಿನಿಯಾಗಿದ್ದಾರೆಂದು ಡಾ.ಮಹಾಂತೇಶ ಮಲ್ಲನಗೌಡರ ಬಣ್ಣಿಸಿದರು ಸುಕ್ಷೇತ್ರ ಹಾರ್‍ನಹಳ್ಳಿ ಕೋಡಿಮಠದ ಪರಮ ಪೂಜ್ಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು, ಸುಕ್ಷೇತ್ರ ಟಣಕನಕಲ್ಲ ಕಾಲಜ್ಞಾನ ಬ್ರಹ್ಮ ಶ್ರೀ ಶರಣಬಸವೇಶ್ವರ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದರು.ಅಧ್ಯಕ್ಷತೆಯನ್ನು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಮೇಲೆ ಹೊಸಳ್ಳಿ ಡೆಪ್ಯೂಟಿ ಕಮಾಂಡೆಂಟ್ ಐ.ಆರ್.ಬಿ. ಸುದರ್ಶನ್, ಐ.ಆರ್.ಬಿ ಡಿ.ವಾಯ್.ಎಸ್.ಪಿ. ಬೆಲ್ಲದ್, ಕಲ್ಲಿನಾಥೇಶ್ವರ ಶಾಶ್ತ್ರಿಗಳು, ಮುಖಂಡರಾದ ಸಂಗಪ್ಪ ವಕ್ಕಳದ್, ವಕೀಲರಾದ ಪೀರಾಹುಸೇನ್ ಹೋಸಳ್ಳಿ, ಡಿ.ಶ್ರೀಧರ ಮೂರ್ತಿ, ದೇವಪ್ಪ ಮಾಗಳದ ಹಾಜಿ ಮೆಹಬೂಬ್ ಅಲಿ ಸಯ್ಯದ್ ನಾಗರಾಜ ಗೋನಾಳ ಕುಷ್ಟಗಿ, ಸಂಗಿತ ಕಲಾವಿದ ಸದಾಶಿವ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದು.
Home
»
»Unlabelled
» ಸಯ್ಯದ್ ಸಹಾಯಮಾಡುವ ಕೈ ಹೊಂದಿದ್ದಾರೆ : ಡಾ.ಎಂ.ಮಲ್ಲನಗೌಡರ
Advertisement
Recent Posts
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
Koppal New Business Centers - New Show Rooms
04 Aug 20180Koppal New Business Centers - New Show Rooms Mobi...Read more »
ಅಹ್ಮದ್ ಪಟೇಲ್ ಗೆ ಗೆಲುವು: ಮೋದಿ, ಅಮಿತ್ ಶಾಗೆ ಭಾರೀ ಮುಖಭಂಗ
08 Aug 20170ಅಹ್ಮದಾಬಾದ್, ಆ. 9: ಗುಜರಾತ್ ನ ವಿಧಾನಸಭೆಯಿಂದ ರಾಜ್ಯ ಸ...Read more »
ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಬದಲಾವಣೆಗೊಂಡಿರುವ ಕನ್ನಡನೆಟ್ .ಕಾಂ ಆನ್ ಲೈನ್ ಪತ್ರಿಕೆಗೆ ಬೇಟಿ ಕೊಡಿ
18 Apr 20161New Look and Style - Kannadanet.com online news p...Read more »
please login to kannadanet.com for regular news-updates
18 Apr 20160New Look and Style - Kannadanet.com online news p...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.