ಕೊಪ್ಪಳ,ಸೆ.೨೬: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದುಡಿದ ಕೂಲಿಕಾರ್ಮಿಕರಿಗೆ ಕೂಲಿ ಹಣವನ್ನು ಕೇವಲ ಒಂದು ವಾರದಲ್ಲಿ ಪಾವತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜರಾಂ ಯವರು ಭರವಸೆ ನೀಡಿದರು.


ಭೀಕರ ಬರಗಾಲ ಪರಸ್ಥಿತಿಯಲ್ಲಿ ತಾಲೂಕಿನ ಜನರು ಗೂಳೆ ಹೊಗುವದು ತಪ್ಪಿಸಲು ಈ ಯೋಜನೆಯನ್ನು ತುಂಬಾ ಉಪಯಕ್ತವಾಗಿದೆ ಮತ್ತು ಬಡಜನರು ಯಾವದೇ ಕಾರಣಕ್ಕು ಗೊಳೆ ಹೊಗುವದು ಅವಶ್ಯಕತೆ ಇಲ್ಲ. ಸರಕಾರ ಕೂಲಿ ಕಾರ್ಮಿಕರಿಗಾಗಿಯೇ ಈ ಯೋಜನೆಯನ್ನು ಜಾರಿಗೆ ತಂದಿದೆ, ಜನರು ಈ ಯೋಜನೆಯ ಸದುಪಯೋಗ ಪಡಿಸಿಕೋಳ್ಳಬೇಕು ಮತ್ತು ಈ ಯೋಜನೆಯಲ್ಲಿ ದುಡಿದ ಕೂಲಿ ಕಾರ್ಮೀಕರಿಗೆ ಕೂಲಿ ಹಣವನ್ನು ಬೇಗನೆ ಪಾವತಿಸಲು ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟಿನ ಆದೇಶ ನೀಡಲಾಗಿದೆ. ಆದಾಗ್ಯ ಸಹ ಅಧಿಕಾರಿಗಳ ನಿರ್ಲಕ್ಷ ವಹಿಸಿದರೆ ಆ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಇಓ ರಾಜಾರಾಂ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಕು.ರೇಣುಕಾ ಟಂಕದ ಹಾಲಿ, ಅಧ್ಯಕ್ಷರಾದ ಮುತ್ತಣ್ಣ ಗೊಂಡಬಾಳ, ಗ್ರಾ.ಪಂ.ಮಾಜಿ ಅದ್ಯಕ್ಷರಾದ ಈರಪ್ಪ, ಉಪಾದ್ಯಕ್ಷರಾದ ಖಾಜಾಬಿ ಸೋಂಪುರ, ಸದಸ್ಯರಾದ ಶಂಕ್ರಮ್ಮ ಜಂತ್ಲಿ ಗ್ರಾಮದ ಸಾರ್ವಜನಿಕರು ಹಾಜರಿದ್ದರು.
0 comments:
Post a Comment
Click to see the code!
To insert emoticon you must added at least one space before the code.