ಬಳ್ಳಾರಿ, ಸೆ. ೨೭: ನಗರದ ಸಂಸ್ಕೃತಿ ಪ್ರಕಾಶನ ಹೊರತಂದಿರುವ ಕನ್ನಡ ಉಪನ್ಯಾಸಕ ಡಾ. ಶ್ಯಾಮೂರ್ತಿ ಜಿ ವಡ್ಡಿನಕಟ್ಟೆ ಅವರ ಕನ್ನಡ ಆತ್ಮ ಕಥನ ಸಾಹಿತ್ಯ ಸಂಶೋಧನಾ ಮಹಾ ಪ್ರಬಂಧ ಮತ್ತು ಲೇಖಕ ಶ್ಯಾಮೂರ್ತಿ ಅವರೇ ಪ್ರಕಟಿಸಿರುವ ನೆಲದ ನಾಲಿಗೆ ಕವನ ಸಂಕಲನ ಕೃತಿ ಬಿಡುಗಡೆ ಸಮಾರಂಭ ಸೆ. ೨೮ ರಂದು ಶುಕ್ರವಾರ ಬೆ. ೧೦-೩೦ ಗಂಟೆಗೆ ಸ್ಥಳೀಯ ಶ್ರೀ ಸರಳಾದೇವಿ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಸಭಾಂಗಣದಲ್ಲಿ ಜರುಗಲಿದೆ.
ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ರಂಗರಾಜ ವನದುರ್ಗ ಅವರು ನೆಲದ ನಾಲಿಗೆ ಕವನ ಸಂಕಲನವನ್ನು ಬಿಡುಗಡೆ ಮಾಡುವರು.
ಕನ್ನಡ ಆತ್ಮ ಕಥನ ಸಾಹಿತ್ಯ ಕೃತಿಯನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾನಕರಿ ಶ್ರೀನಿವಾಸಾಚಾರ್ಯ ಅವರು ಬಿಡುಗಡೆ ಮಾಡಿ ಪರಿಚಯಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಡಿ. ಗಂಗಣ್ಣ ಅವರು ವಹಿಸುವರು. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೋರನೂರು ಟಿ ಕೊಟ್ರಪ್ಪ ಅವರು ಉಪಸ್ಥಿತರಿರುವರು.
ಸಹಾಯಕ ಪ್ರಾಧ್ಯಾಪಕ ಡಾ. ಹೊನ್ನೂರಾಲಿ, ಲೇಖಕ ಡಾ. ಶ್ಯಾಮೂರ್ತಿ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಕೃತಿ ಪ್ರಕಾಶನದ ಪ್ರಕಾಶಕ, ಪತ್ರಕರ್ತ ಸಿ. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.