): ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ೧೪ ಗ್ರಾಮಪಂಚಾಯತಿಗಳಿಗೆ ಸಂಬಂಧಿಸಿದಂತೆ ಒಟ್ಟು ೧೫ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಮೀಸಲಾತಿ ವಿವರವುಳ್ಳ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಪ್ರಕಟಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ವಿವಿಧ ಕಾರಣಗಳಿಂದ ತೆರವಾಗಿರುವ ೧೪ ಗ್ರಾ.ಪಂ. ಕ್ಷೇತ್ರಗಳ ೧೫ ಸದಸ್ಯ ಸ್ಥಾನ ಚುನಾವಣೆಗಾಗಿ ಅಧಿಸೂಚನೆ ಪ್ರಕಟಗೊಂಡಿದ್ದು, ಕುಷ್ಟಗಿ ತಾಲೂಕಿನ ಬೆನಕಾನಾಳ ಗ್ರಾ.ಪಂ.ನ ಮಡಿಕೇರಿ(ಸಾಮಾನ್ಯ) ಹಾಗೂ ಕುಂಬಳಾವತಿ (ಪ.ಜಾತಿ ಮಹಿಳೆ), ಮುದೇನೂರು ಗ್ರಾ.ಪಂ.ನ ಮುದೇನೂರು (ಸಾಮಾನ್ಯ ಮಹಿಳೆ) ಮತಕ್ಷೇತ್ರದ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕೊಪ್ಪಳ ತಾಲೂಕಿನ ಕವಲೂರು ಗ್ರಾ.ಪಂ.ನ ಕವಲೂರು (ಹಿಂದುಳಿದ ವರ್ಗ ಅ ಮಹಿಳೆ), ಹಿರೇಸಿಂದೋಗಿ ಗ್ರಾ.ಪಂ.ನ ಹಿರೇಸಿಂದೋಗಿ (ಸಾಮಾನ್ಯ ಮಹಿಳೆ) ಮತಕ್ಷೇತ್ರದ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾ.ಪಂ.ನ ಹಿರೇವಂಕಲಕುಂಟಾ (ಸಾಮಾನ್ಯ), ಗುನ್ನಾಳ ಗ್ರಾ.ಪಂ.ನ ಹುಣಸಿಹಾಳ (ಸಾಮಾನ್ಯ), ಕುಕನೂರು ಗ್ರಾ.ಪಂ.ನ ಕುಕನೂರು (ಸಾಮಾನ್ಯ), ರಾಜೂರು ಗ್ರಾ.ಪಂ.ನ ಆಡೂರು (ಹಿಂದುಳಿದ ವರ್ಗ-ಬ) ಮತಕ್ಷೇತ್ರದ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗಂಗಾವತಿ ತಾಲೂಕಿನ ಢಣಾಪುರ ಗ್ರಾ.ಪಂ.ನ ಢಣಾಪುರ (ಪ.ಜಾತಿ ಮಹಿಳೆ), ಶ್ರೀರಾಮನಗರ ಗ್ರಾ.ಪಂ.ನ ಶ್ರೀರಾಮನಗರ (ಹಿಂದುಳಿದ ವರ್ಗ-ಅ), ಬಸಾಪಟ್ಟಣ ಗ್ರಾ.ಪಂ.ನ ಬಸಾಪಟ್ಟಣ (ಹಿಂ.ವರ್ಗ-ಅ ಮಹಿಳೆ), ಹೇರೂರು ಗ್ರಾ.ಪಂ.ನ ಭಟ್ಟರಹಂಚಿನಾಳಕ್ಯಾಂಪ (ಸಾಮಾನ್ಯ), ಹಣವಾಳ ಗ್ರಾ.ಪಂ.ನ ಹಣವಾಳ (ಸಾಮಾನ್ಯ), ಕಾರಟಗಿ ಗ್ರಾ.ಪಂ.ನ ಕಾರಟಗಿ (ಸಾಮಾನ್ಯ) ಮತಕ್ಷೇತ್ರದ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣೆಗಾಗಿ ಆ. ೨೧ ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಆ. ೨೮ ಕೊನೆಯ ದಿನವಾಗಿರುತ್ತದೆ. ಆ. ೨೯ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಆ.೩೧ ಕೊನೆಯ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ಸೆ. ೦೯ ರಂದು ಬೆಳಿಗ್ಗೆ ೦೭ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ಮತದಾನ ನಡೆಸಲಾಗುವುದು. ಮತಗಳ ಎಣಿಕೆ ಸೆ. ೧೨ ರಂದು ಬೆಳಿಗ್ಗೆ ೮ ಗಂಟೆಯಿಂದ ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದ್ದು, ಚುನಾವಣಾ ಪ್ರಕ್ರಿಯೆಯನ್ನು ಸೆ.೧೩ ರೊಳಗೆ ಮುಕ್ತಾಯಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ತುಳಸಿ ಮದ್ದಿನೇನಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.