
ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ೬೬ ನೇ ಸ್ವಾತಂತ್ರ್ಯ ದಿನಾಚರಣೆ
ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗು ಪ್ರೌಢ ಶಾಲೆಯಲ್ಲಿ ೬೬ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ದ್ವಜಾರೊಹಣವನ್ನು ಸಂಸ್ಥೆಯ ಪ್ರಧಾನ ಕಾರ್ಯದಶಿಗಳಾದ ಆರ್.ಎಚ್. ಅತ್ತನೂರ ನೆರವೇರಿಸಿದರು. ಕಾರ್ಯಕ್ರಮದ ಮೊದಲಿಗೆ ಮಹಾತ್ಮ ಗಾಂಧಿಜೀಯವರ ಭಾವ ಚಿತ್ರಕ್ಕೆ ಹಿರಿಯರಾದ ಹಂಪಣ್ಣನವರು ಪೂಜೆ ನೆರವೇರಿಸಿದರು.
ಈ ಸಂಧಬ್ದಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಕ್ಕಳು ಹಾಗೂ ಶಿಕ್ಷಕರು ಮಾತನಾಡಿದರು. ೭ನೇ ತರಗತಿಯ ವಿದ್ಯಾರ್ಥಿಪವನ ಕುಮಾರ ವೀರ ಮದಕರಿ ಏಕಭಿನಯ ಪತ್ರದಲ್ಲಿ ಅತ್ಯಂತ ಆಕರ್ಷಣಿಯವಾಗಿ ಪ್ರದಶಿಸಿದನು ಕಾರ್ಯಕ್ರಮದ ಮೊದಲಿಗೆ ಶಾಲಾ ಮಕ್ಕಳಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರಬಾತ್ ಪೇರಿ ನಡೆಸಿದರು. ನಂತರ ಎಲ್ಲಾ ಮಕ್ಕಳಿಗೆ ಸಿಹಿ ವಿತರಿಸಿದರು ಈ ಕಾರ್ಯಕ್ರಮದಲ್ಲಿ ಶಶಿಕುಮಾರ ಸ್ವಾಗತಿಸಿದರು ಮಾರುತಿ ಕೆ.ಎಚ್. ನಿರೂಪಿಸಿದರು. ಶಿವರಾಜ ವಂದಿಸಿದರು.
0 comments:
Post a Comment