ಯುವಕರು ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಭಾಗವಹಿಸುವಂತಾದಾಗ ಮಾತ್ರ ದೇಶದ ಕ್ರೀಡಾ ಕ್ಷೇತ್ರ ಅಭಿವ್ರದ್ದಿಯಾಗಲು ಸಾಧ್ಯ, ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗವಾಗಬೇಕೆಂದು ಶಾಸಕರಾದ ಕರಡಿ ಸಂಗಣ್ಣ ಹೇಳಿದರು.
ಅವರು ಕುಣಿಕೇರಿತಾಂಡಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಕಬಡ್ಡಿ ಕ್ರೀಡೆ ಆಡುವುದರ ಮೂಲಕ ಚಾಲನೆ ನೀಡಿ ಮಾಡನಾಡಿದರು. ಮಾನವನ ಮಾನಸಿಕ ಸದೃಢತಗೆ ದೈಹಿಕವಾಗಿ ಸದೃಡವಾಗಿರುವುದು ಬಹಳ ಮುಖ್ಯ, ಕ್ರೀಡಾಪಟುಗಳು ಎಂದರೆ ಅತ್ಯಂತ ಕಠಿಣ ಶ್ರಮಜೀವಿಗಳು, ಸ್ಪರ್ದಾಗಳು ಕ್ರೀಡೆಯ ಜೊತೆಗೆ ಶಿಕ್ಷಣಕ್ಕೂ ಪ್ರಾಶಸ್ತ್ಯ ನೀಡಿದರೆ ಯುವಕ ಭವಿಷ್ಯ ಉಜ್ವಲವಾಗುವದರಲ್ಲಿ ಸಂದೇಹವಿಲ್ಲ. ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ದೇಶೀಯ ಕ್ರೀಡೆಗಳಾದ ಕಬ್ಬಡ್ಡಿ, ಖೋ-ಖೋ, ಕುಸ್ತಿ, ಹಾಕಿ ಇನ್ನೂ ಮುಂತಾದಗಳನ್ನು ಉಳಿಸಿ ಬೆಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ಯುವಕರು ಕ್ರೀಡೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ದೇಶ ಪ್ರೇಮ ಬೆಳೆಯುವದರ ಜೊತೆಗೆ ನಾವೆಲ್ಲರೂ ಒಂದು ಎಂಬ ಸಹೋದರತ್ವ ಮೂಡುತ್ತದೆ. ಅಲ್ಲದೆ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಸ್ಪರ್ದೆಗಳು ನೈತಿಕ ಸ್ಥೈರ್ಯವನ್ನು ನೀಡುತ್ತವೆ. ಮನೆಗೊಂದು ಮಗು ಇರಲಿ, ಆ ಮಗು ಕ್ರೀಡಾ ಪಟುವಾಗಿಲಿ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಅಪ್ಪಣ್ಣ ಪದಕಿ, ಗ್ರಾಮದ ಮುಖಂಡರಾದ ಶಿವಪ್ಪ ಪೂಜಾರ, ಗ್ರಾ.ಪಂ.ಅಧ್ಯಕ್ಷೆ ಸರಿತಾಬಾಯಿ ಮೂಲಿಮನಿ, ಸದಾಶಿವಯ್ಯ ಹಿರೇಮಠ, ತೋಟಪ್ಪ ಕಾಮನೂರು ಭರತನಾಯ್ಕ, ಹಾಲೇಶ ಕಂದಾರಿ, ರಾಮಚಂದ್ರನಾಯ್ಕ, ಟಿಕ್ಯಾ ನಾಯ್ಕ, ಗಣೇಶ ನಾಯ್ಕ, ಸೋಮಲ್ಯಾ ನಾಯ್ಕ, ನಾಗರಾಜ, ಮುಂತಾದವರು ಹಾಜರಿದ್ದರು.
0 comments:
Post a Comment
Click to see the code!
To insert emoticon you must added at least one space before the code.