PLEASE LOGIN TO KANNADANET.COM FOR REGULAR NEWS-UPDATES


  ಪ್ರಕಾಶಕ ಆರ್.ಎನ್. ಹಬ್ಬು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದು ಲಕ್ಷ ರೂ.ಗಳ ದತ್ತಿನಿಧಿಯಿಂದ ೨೦೧೦-೧೧ ನೇ ಸಾಲಿನ ವಿಮರ್ಶೆ ಪ್ರಕಾರದ ಪುಸ್ತಕ ಪ್ರಕಟಣೆ ಮಾಡಿದ ಪ್ರಕಾಶನ ಸಂಸ್ಥೆಗೆ ರೂ. ೫೦೦೦ ಹಾಗೂ ೨೦೧೧-೧೨ನೇ ಸಾಲಿಗೆ ನಾಟಕ ಪ್ರಕಾರದ ಪುಸ್ತಕ ಪ್ರಕಟಣೆ ಮಾಡಿದ ಪ್ರಕಾಶನ ಸಂಸ್ಥೆಗೆ ರೂ. ೫೦೦೦ ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
  ಕನ್ನಡ ಪುಸ್ತಕ ಪ್ರಕಾಶನ ಸಂಸ್ಥೆಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.  ೨೦೧೦ ರಲ್ಲಿ ಪ್ರಕಟಿಸಲಾದ ವಿಮರ್ಶೆ ಪ್ರಕಾರದ ಪುಸ್ತಕ ಹಾಗೂ ೨೦೧೧ ರಲ್ಲಿ ಪ್ರಕಟವಾದ ನಾಟಕ ಪ್ರಕಾರದ ಪುಸ್ತಕಗಳನ್ನು ಸ್ಪರ್ಧೆಗೆ ಕಳುಹಿಸಬೇಕು.  ಪ್ರತಿ ಪ್ರವೇಶಕ್ಕೆ ೩ ಪುಸ್ತಕಗಳನ್ನು ಕಳುಹಿಸಬೇಕು.  ಸ್ಪರ್ಧೆಗೆ ಪುಸ್ತಕಗಳನ್ನು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೧೮ ಇವರಿಗೆ ಸೆಪ್ಟಂಬರ್ ೧೦ ರ ಒಳಗಾಗಿ ಕಳುಹಿಸಬೇಕು.  ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: ೦೮೦-೨೬೬೨೩೫೮೪ ಕ್ಕೆ ಸಂಪರ್ಕಿಸುವಂತೆ ತಿಳಿಸಿದೆ.

13 Aug 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top