ಹಟ್ಟಿಯಲ್ಲಿ ಬೀರಲಿಂಗೇಶ್ವರ ನವ ಯುವಕ ಸಂಘ ಉದ್ಘಾಟನೆ ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ
ಕೊಪ್ಪಳ : ದಿನಾಂಕ ೩೦- ಸೋಮವಾರ ಕೊಪ್ಪಳ ತಾಲೂಕಿನ ಹಟ್ಟಿಯಲ್ಲಿ ಸಂಜೆ ೫ ಗಂಟೆಗೆ ಶ್ರೀ ಲಕ್ಕಾಂಬೆ, ದುರ್ಗಾಂಬೆ ದೇವಸ್ಥಾನದ ಆವರಣದಲ್ಲಿ ಬೀರಲಿಂಗೇಶ್ವರ ನವ ಯುವಕ ಸಂಘ ಉದ್ಘಾಟನೆ ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ೧೫ನೇ ಜಾನಪದ ಸಂಜೆ ಕಾರ್ಯಕ್ರಮ ನೆರವೇರಲಿದೆ. ಜಿಲ್ಲಾ ಪಂಚಾಯತ ಸದಸ್ಯರಾದ ನಾಗನಗೌಡ ಪಾಟೀಲ ರವರು ಉದ್ಘಾಟಿಸಲಿದ್ದು, ಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ತೋಟಪ್ಪ ಎಂ. ಸಿಂಟ್ರ ಅಧ್ಯಕ್ಷತೆ ವಹಿಸುವರು.
ತಾಲೂಕ ಪಂಚಾಯತ ಸದಸ್ಯರಾದ ಮುದ್ದಮ್ಮ ರಂಗಪ್ಪ ಕರಡಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ, ಜಿಲ್ಲಾ ಸರ್ಕಾರಿ ಅಭಿಯೋಜಕರಾದ, ಬಿ.ಎಸ್. ಪಾಟೀಲ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶರಣಪ್ಪ ವಡಗೇರಿ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಜಿಲ್ಲಾ ಕನಕದಳ ಸೇವಾ ಸಮಿತಿ ಅಧ್ಯಕ್ಷರಾದ ಕರಿಯಪ್ಪ ಬೇವಿನಹಳ್ಳಿ, ಗೌರವಾಧ್ಯಕ್ಷರಾದ ದ್ಯಾಮಣ್ಣ ಜಿ. ಕರಿಗಾರ, ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಂದಪ್ಪ ಚಿಲಗೋಡ, ಗ್ರಾಮ ಪಂಚಾಯತ ಸದಸ್ಯರಾದ ಹಾಲವ್ವ ಎಸ್. ನಗರ, ಮುದ್ದವ್ವ ಪೂಜಾರ, ಹಾಲಪ್ಪ ಶಿಳ್ಳಿಕ್ಯಾತರ, ಬುಡ್ಡಮ್ಮ ದ್ಯಾಮಣ್ಣ ಕರಿಗಾರ, ಮಾಜಿ ಅಧ್ಯಕ್ಷರಾದ ಭರಮಪ್ಪ ಎಸ್. ನಗರ, ಪ್ರಗತಿಪರ ರೈತರಾದ ನೀಲಪ್ಪ ಜಿ. ಕರಿಗಾರ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಸೋಮಣ್ಣ ಅಳವಂಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಬೀರಲಿಂಗೇಶ್ವರ ನವ ಯುವಕ ಸಂಘದ ಅಧ್ಯಕ್ಷರಾದ ವಸಂತ ಹೆಚ್. ಕರಿಗಾರ ಹಾಗೂ ಕಾರ್ಯದರ್ಶಿಗಳಾದ ಗುಡದಪ್ಪ ಚಿಲವಾಡಗಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.