PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ-೨೮ : ಲಯನ್ಸ್ ಕ್ಲಬ್ ಕೊಪ್ಪಳದ ನೂತನ ಅಧ್ಯಕ್ಷರಾಗಿ ನಗರದ ಗಣ್ಯ ವರ್ತಕರಾದ ಪ್ರಭು ಹೆಬ್ಬಾಳ ಅಧಿಕಾರ ಸ್ವೀಕರಿಸಿದರು. ಸ್ವಾಮಿ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ದಿ. ೨೮-೦೭-೧೨, ಶನಿವಾರ ಸಂಜೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಈ ಸಾಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ಪದಗ್ರಹಣ ಅಧಿಕಾರಿಗಳಾಗಿ ಆಗಮಿಸಿದ್ದ ಗದಗಿನ ಲಯನ್ ಆನಂದ ಪೋಟ್ನಿಸ್ ಇವರು ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧನೆಯೊಂದಿಗೆ ಕರ್ತವ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಲಯನ್ಸ್ ಕ್ಲಬ್ ಪರಂಪರೆಯಂತೆ ವಹಿಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸಂಪತ್ ಕುಮಾರ ಅಗಮಿಸಿದ್ದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಲಯನ್ ಪ್ರಭು ಹೆಬ್ಬಾಳ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿಯೂ, ತಮ್ಮ ಅಧಿಕಾರವಧಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರ ತಡೆಗಟ್ಟಲು ಅಗತ್ಯವಾದ ಜಾಗೃತಾ ಆಂದೋಲನ ಮತ್ತು ಶಿಬಿರಗಳ ಬಗ್ಗೆ ಹೆಚ್ಚು ಗಮನ ಹರಿಸುವುದಾಗಿ ಹೇಳಿದರಲ್ಲದೇ, ಎಲ್ಲರ ಸಹಾಯ, ಸಹಕಾರ ತಮಗೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಅತಿಥಿಗಳ ಪರಿಚಯವನ್ನು ಹಿರಿಯರಾದ ಲಯನ್ ಚಂಪಾಲಾಲ್ ಜೀ ಮೆಹತಾ ನಿರ್ವಹಿಸಿದರು. ಸ್ವಾಮಿ ವಿವೇಕಾನಂದ ಶಾಲೆಯ ಕು. ಅನಘಾ, ಅಮೃತ ಮತ್ತು ಚಂದನ ಪ್ರಾರ್ಥಿಸಿದರೆ, ಸ್ವಾಗತವನ್ನು ಲಯನ್ ಮಹೇಶ ಮಿಟ್ಟಲಕೋಡ್ ಮಾಡಿದರು. ಕ್ಲಬ್‌ನ ವಾರ್ಷಿಕ ವರದಿಯನ್ನು ಕ್ಲಬ್ ಕಾರ್ಯದರ್ಶಿ ಲಯನ್ ಚಂದ್ರಕಾಂತ ತಾಲೆಡಾ ವಾಚಿಸಿದರು. ಧ್ವಜ ವಂದನೆಯನ್ನು ಲಯನ್ ಪಿ.ಕೆ. ವಾರದ್ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿನಿ ಕು. ಪ್ರಿಯಾ ಪುರಂದರೆ ಮತ್ತು ಮೂರು ಬಾರಿ ಸತತವಾಗಿ ರಾಜ್ಯಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ ಕು. ಮಂಜುನಾಥ ಇವರಿಗೆ ಬಹುಮಾನ ವಿತರಿಸಲಾಯಿತು.
ಲಯನ್ ಪರಮೇಶ್ವರಪ್ಪ ಕೊಪ್ಪಳ, ಲಯನ್ ಬಸವರಾಜ್ ಬಳ್ಳೊಳ್ಳಿ, ವಿ.ಎಸ್. ಅಗಡಿ, ಎಸ್. ಮಲ್ಲಿಕಾರ್ಜುನ, ಜವಾಹರ ಜೈನ್, ಡಾ. ಎನ್.ಎಸ್. ಗಾಯಕವಾಡ, ಗವಿಸಿದ್ಧಪ್ಪ ಮುದಗಲ್, ವೀರೇಶ ಹತ್ತಿ, ಅಭಯ್ ಕುಮಾರ ಮೆಹತಾ, ರಾಜೇಂದ್ರ ಜೈನ್ ಸೇರಿದಂತೆ ಎಲ್ಲ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.
ಅಂದಾನಪ್ಪ ಅಗಡಿ, ಎಸ್.ಬಿ. ನಾಗರಳ್ಳಿ, ಸರಕಾರಿ ವಕೀಲ ಬಿ.ಎಸ್. ಪಾಟೀಲ್, ಸಿ.ವಿ. ಕಲ್ಮಠ, ಗವಿಸಿದ್ಧಪ್ಪ ಕೊಪ್ಪಳ, ಶ್ರೀಮತಿ ಮಮತಾ ಕುದರಿಮೋತಿ, ಶ್ರೀಮತಿ ಹೇಮಲತಾ ಪರೀಕ್ಷಿತರಾಜ್, ಡಾ. ಮಹಾಂತೇಶ ಮಲ್ಲನಗೌಡರ, ಎ.ಜಿ. ಶರಣಪ್ಪ, ಕೊಟ್ರಗೌಡ್ರ ಹುರಕಡ್ಲಿ ಸೇರಿದಂತೆ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ಪ್ರಗತಿ ಮಹಿಳಾ ಮಂಡಳದ ಸದಸ್ಯರು ನೂತನ ಅಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ ಶುಭ ಕೋರಿದರು.
ಗದಗ್, ಹುಬ್ಬಳ್ಳಿ, ಕುಷ್ಟಗಿಯ ಲಯನ್ಸ್ ಪದಾಧಿಕಾರಿಗಳಲ್ಲದೇ, ನಗರದ ಗಣ್ಯರು ಸೇರಿದಂತೆ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಈ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ ಪ್ರೊ. ಮನೋಹರ ದಾದ್ಮಿ, ವೆಂಕಟೇಶ ಶ್ಯಾನ್‌ಭಾಗ, ಗುರುರಾಜ್ ಹಲಗೇರಿ, ಶಶಿಧರ ಮಾಲಿಪಾಟೀಲ ನೂತನ ಸದಸ್ಯರಾಗಿ ಲಯನ್ಸ್ ಕ್ಲಬ್ ಸೇರಿದರು.
ವಿವೇಕಾನಂದ ಶಾಲೆಯ ಶಿಕ್ಷಕ ಮಹೇಶ ಬಳ್ಳಾರಿ, ಎಸ್.ಸಿ. ಹಿರೇಮಠ ಮತ್ತು ವೀರೇಶ ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರು.

29 Jul 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top