ವಾರ್ತಾ ಇಲಾಖೆಯು ೨೦೧೨-೧೩ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿಯಲ್ಲಿ ವಾರ್ತಾ ಫೆಲೋಶಿಫ್ಗಾಗಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಂದ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಜು. ೨೭ ರವರೆಗೆ ವಿಸ್ತರಿಸಲಾಗಿದೆ.
ಅಧ್ಯಯನದ ಅವಧಿಯು ೬ ತಿಂಗಳುಗಳಾಗಿದ್ದು, ಅಧ್ಯಯನಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಇಲಾಖೆ ನೀಡಲಿದೆ. ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಪತ್ರಿಕೋದ್ಯಮ ವಿಷಯದಲ್ಲಿ ಪದವಿ/ ಪಿಜಿ ಡಿಪ್ಲೊಮಾ/ ಎಂ.ಎ ಪದವಿಯಲ್ಲಿ ಕನಿಷ್ಠ ಶೇ. ೫೫ ರಷ್ಟು ಅಂಕಗಳನ್ನು ಪಡೆದಿರಬೇಕು. ವಯೋಮಿತಿ ೨೧ ರಿಂದ ೩೫ ವರ್ಷದೊಳಗಿರಬೇಕು. ಸಮೂಹ ಮಾಧ್ಯಮ ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಬೇಕಾಗಿದ್ದು, ಅಭ್ಯರ್ಥಿಯು ೫ ವಿವಿಧ ಶೀರ್ಷಿಕೆಯಡಿ ಪ್ರಾಸ್ತಾವಿಕ ಕಿರು ಟಿಪ್ಪಣಿಗಳನ್ನು ಸಲ್ಲಿಸಬೇಕು.
ಆಯ್ಕೆ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಒಟ್ಟು ೧೦ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಿದೆ. ಅರ್ಜಿ ನಮೂನೆಗಳು ಮತ್ತು ಅರ್ಹತಾ ನಿಯಮಗಳ ಕುರಿತ ಮಾಹಿತಿಯನ್ನು ವೆಬ್‌ಸೈಟ್ www.karnatakavarthe.org ಇಂದ ಪಡೆಯಬಹುದಾಗಿದೆ.
ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ ೨೦ ರಂದು ಸಂಜೆ ೫-೩೦ ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಇಲಾಖೆ, ನಂ: ೧೭, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-೧ ಇಲ್ಲಿಗೆ ಸಲ್ಲಿಸಬೇಕು.
0 comments:
Post a Comment
Click to see the code!
To insert emoticon you must added at least one space before the code.