PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :- ಶಿಕ್ಷಕರ ಕಲಾವೃಂದ ಮತ್ತು ಶ್ರೀ ಪಂಚಲಿಂಗೇಶ್ವರ ನಾಟ್ಯ ಸಂಘ ಗಿಣಗೇರಾ ಇವರು ದಿನಾಂಕ ೧೬/೦೬/೨೦೧೨ರಂದು ಶನಿವಾರ ಸಂಜೆ ೦೬ :೦೦ ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಗಂಡುಗಲಿ ಕುಮಾರರಾಮ ಎಂಬ ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಿದ್ದಾರೆ. 
ರಂಗಭೂಮಿಯ ಹಿರಿಯ ಕಲಾವಿದನಾದ ಮಲ್ಲೇಶ ಅಮೀನಗಡ ಇವರ ಸಹಾಯಾರ್ಥವಾಗಿ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಆದ್ದರಿಂದ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿಯ ಬಡಕಲಾವಿದರಿಗೆ ಸಹಾಯ ಮಾಡಬೇಕೆಂದು ಶಿಕ್ಷಕರ ಕಲಾ ವೃಂದದ ವತಿಯಿಂದ ಕೋರಲಾಗಿದೆ. 
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ರಂಗಕರ್ಮಿ ದಾರವಾಡದ ರಂಗಾಯಣ ನಿರ್ದೆಶಕರಾಗಿದ್ದ ಏಣಿಗಿ ನಟರಾಜರಿಗೆ ಶದ್ಧಾಂಜಲಿ ಕಾರ್ಯಕ್ರಮವಿದೆ. ಮಾಹಿತಿಗಾಗಿ - ೯೯೦೨೮೯೩೬೭೧

14 Jun 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top