ಕೃಷಿ ಇಲಾಖೆಯಿಂದ ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಯಾವುದೇ ಸೌಲಭ್ಯ ಪಡೆಯಲು ರೈತರು ಕೃಷಿ ಪಾಸ್ ಪುಸ್ತಕ ಹೊಂದುವುದು ಕಡ್ಡಾಯವಾಗಿದ್ದು, ಇದುವರೆಗೂ ಕೃಷಿ ಪಾಸ್ ಪುಸ್ತಕ ಪಡೆಯದೇ ಇರುವ ರೈತರು ಆಯಾ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
ಕೃಷಿ ಇಲಾಖೆಯಿಂದ ರೈತರಿಗೆ ಸಮರ್ಪಕವಾಗಿ ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಒದಗಿಸಲು ಕೃಷಿ ಪಾಸ್ ಪುಸ್ತಕ ವ್ಯವಸ್ಥೆ ಜಾರಿಗೆ ತರಲಾಗಿದೆ. ಅರ್ಹ ರೈತರಿಗೆ ಯೋಜನೆಯ ಸೌಲಭ್ಯ ನೀಡಬೇಕು. ಹಾಗೂ ವ್ಯವಸ್ಥಿತ ರೀತಿಯಲ್ಲಿ ವಿತರಿಸಬೇಕು ಎನ್ನುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರನ್ವಯ ರೈತ ಸಂಪರ್ಕ ಕೇಂದ್ರಗಳಿಂದ ರೈತರಿಗೆ ವಿತರಿಸಲಾಗುವ ಗೊಬ್ಬರ, ಬಿತ್ತನೆ ಬೀಜ, ಇತರೆ ಕೃಷಿ ಉಪಕರಣಗಳು ಸೇರಿದಂತೆ ಯಾವುದೇ ಸೌಲಭ್ಯ ಪಡೆಯಲು ರೈತರು ಕೃಷಿ ಪಾಸ್ ಪುಸ್ತಕ ಹಾಜರುಪಡಿಸುವುದು ಕಡ್ಡಾಯವಾಗಿದ್ದು, ಈಗಾಗಲೆ ಜಿಲ್ಲೆಯಲ್ಲಿ ಶೇ. ೬೦ ರಷ್ಟು ರೈತರಿಗೆ ಕೃಷಿ ಪಾಸ್ ಪುಸ್ತಕ ವಿತರಣೆ ಮಾಡಲಾಗಿದೆ. ಇದುವರೆಗೂ ಕೃಷಿ ಪಾಸ್ ಪುಸ್ತಕ ಪಡೆಯದೇ ಇರುವ ರೈತರು ಆಯಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳಿಂದ ಕೂಡಲೆ ಪಡೆದುಕೊಳ್ಳಬೇಕು. ಕೃಷಿ ಪಾಸ್ ಪುಸ್ತಕ ಹಾಜರುಪಡಿಸದ ರೈತರಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಯಾವುದೇ ಸೌಲಭ್ಯ ವಿತರಿಸಲಾಗುವುದಿಲ್ಲ. ಆದ್ದರಿಂದ ಇದುವರೆಗೂ ಕೃಷಿ ಪಾಸ್ ಪುಸ್ತಕ ಪಡೆಯದೇ ಇರುವ ರೈತರು ಕೂಡಲೆ ಕೃಷಿ ಪಾಸ್ ಪುಸ್ತಕಗಳನ್ನು ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹೇಳಿದರು.
0 comments:
Post a Comment
Click to see the code!
To insert emoticon you must added at least one space before the code.